ಫೆಬ್ರವರಿ ಹಾಗೂ ಮಾರ್ಚಿ 2022ರ ಕಾರ್ಯಕ್ರಮಗಳು


ಜೇನು ಸಾಕಾಣಿಕೆಯಲ್ಲಿ ಉದ್ಯಮಶೀಲತೆ ತರಬೇತಿ

ಸುತ್ತೂರಿನ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ ಹಾಗೂ ಹ್ಯಾಂಡ್ ಇನ್ ಹ್ಯಾಂಡ್ ಸಂಸ್ಥೆಯ ಸಹಯೋಗದೊಂದಿಗೆ ದಿನಾಂಕ 2 ಫೆಬ್ರವರಿ 2022 ರಂದು ಜೇನಿನ ಮಹತ್ವ, ಜೇನು ಹುಳುಗಳ ನಿರ್ವಹಣೆ ಹಾಗೂ ಜೇನುತುಪ್ಪ ಸಂಸ್ಕರಣೆ ಹಾಗೂ ಮೌಲ್ಯವರ್ಧನೆಯಲ್ಲಿ ಉದ್ಯಮಶೀಲತೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ಗೃಹ ವಿಜ್ಞಾನಿಯಾದ ಶ್ರೀ ಮತಿ ನೇತ್ರಾವತಿ ಎತ್ತಿನಮನಿ ಹಾಗೂ ಪ್ರಗತಿಪರ ಜೇನು ಕೃಷಿ ಉದ್ಯಮಿಯಾದ ಹೆಚ್.ಡಿ.ಕೋಟೆಯ ಶ್ರೀ ಸೋಮಾಚಾರಿಯವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಜೇನು ಕೃಷಿ ಹಾಗೂ ಮೌಲ್ಯವರ್ಧನೆ ಕುರಿತು ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ಹುರಾ ಹಾಗೂ ಹೆಡಿಯಾಲ ಗ್ರಾಮದ 25 ಜನ ಭಾಗವಹಿಸಿದ್ದರು.


ಐಐಹೆಚ್ಆರ್ ಹೊಸ ತಳಿಗಳ ಕುರಿತು ಒಂದು ದಿನದ ತರಬೇತಿ

ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ಐಐಹೆಚ್ಆರ್) ವತಿಯಿಂದ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ ಸುತ್ತೂರಿನಲ್ಲಿ ಐಐಹೆಚ್ಆರ್ ಹೊಸ ತಳಿಗಳ ಪರಿಚಯ ಕುರಿತ 1 ದಿನದ ತರಬೇತಿ ಕಾರ್ಯಕ್ರಮವನ್ನು ದಿನಾಂಕ 05 ಫೆಬ್ರವರಿ 2022 ರಂದು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಐಐಹೆಚ್ಆರ್ ಪ್ರಧಾನ ವಿಜ್ಞಾನಿಗಳಾದ ಶ್ರೀ ವೆಂಕಟಕುಮಾರ್, ಡಾ. ಅನಂತಶಂಕರ್ ಹಾಗೂ ಡಾ. ಸೆಂಥಿಲ್ ರವರು ಐಐಹೆಚ್ಆರ್ ಸಂಸ್ಥೆಯು ಬಿಡುಗಡೆಗೊಳಿಸಿದ ಹೊಸ ತಳಿ ತಂತ್ರಜ್ಞಾನಗಳ ಮಾಹಿತಿಯನ್ನು ರೈತರಿಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ಪ್ರಭಾರ ಹಿರಿಯ ವಿಜ್ಞಾನಿ ಶ್ರೀಮತಿ ಹೆಚ್.ವಿ. ದಿವ್ಯಾ, ತೋಟಗಾರಿಕಾ ವಿಜ್ಞಾನಿ ಡಾ. ಜಿ. ಎಂ. ವಿನಯ್, ಕೆವಿಕೆಯ ಇತರ ಸಿಬ್ಬಂದಿಗಳು ಹಾಗೂ ಮೈಸೂರು ಜಿಲ್ಲೆಯ ವಿವಿಧ ತಾಲ್ಲೂಕಿನ ೧೫ ಪ್ರಗತಿ ಪರ ರೈತರು ಭಾಗವಹಿಸಿದ್ದರು. ತರಬೇತಿಯ ನಂತರ ಐಐಹೆಚ್ಆರ್ ರವರು ಅಭಿವೃದ್ಧಿ ಪಡಿಸಿರುವ ಟೊಮಾಟೋ (ಅರ್ಕಾ ಅಭೇದ್), ಮೆಣಸು (ಅರ್ಕಾ ಮೇಘನಾ ಹಾಗೂ ಅರ್ಕಾ ಶ್ವೇತಾ), ಬದನೆ (ಅರ್ಕಾ ಆನಂದ್), ಬಳ್ಳಿ ಬಿನ್ಸ್ (ಅರ್ಕಾ ಮಂಗಳ) ತರಕಾರಿ ಬೀಜಗಳನ್ನು ರೈತರಿಗೆ ವಿತರಿಸಲಾಯಿತು.


ವಿಶ್ವ ದ್ವಿದಳ ಧಾನ್ಯಗಳ ದಿನಾಚರಣೆ

ಸುತ್ತೂರಿನ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ದಿನಾಂಕ 10 ಫೆಬ್ರವರಿ 2022 ರಂದು ವಿಶ್ವ ದ್ವಿದಳ ಧಾನ್ಯಗಳ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಕೆವಿಕೆಯ ಪ್ರಭಾರ ಹಿರಿಯ ವಿಜ್ಞಾನಿ ಹಾಗು ಮುಖ್ಯಸ್ಥರಾದ ಶ್ರೀಮತಿ ದಿವ್ಯಾ ಹೆಚ್.ವಿ.ಯವರು, ರೈತರನ್ನು ಬೀಜ ಸಂಸ್ಕರಣ ಘಟಕ ಹಾಗೂ ದ್ವಿದಳ ಧಾನ್ಯಗಳ ಬೀಜೋತ್ಪಾದನೆ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ 60ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.


ಬಹು ಕಟಾವಿನ ಮೇವಿನ ಬೆಳೆ ಸಿಓಎಫ್ಎಸ್ 1೧ ತಳಿಯ ಕ್ಷೇತ್ರೋತ್ಸವ

ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ, ಸುತ್ತೂರು ವತಿಯಿಂದ ದಿನಾಂಕ 09 ಫೆಬ್ರವರಿ 2022 ರಂದು ನಂಜನಗೂಡು ತಾಲ್ಲೂಕಿನ ತುಮ್ಮನೇರಳೆ ಗ್ರಾಮದಲ್ಲಿ ಬಹುಕಟಾವಿನ ಮೇವಿನ ಬೆಳೆಸಿ ಸಿಓಎಫ್ಎಸ್ 31 ತಳಿಯ ಕ್ಷೇತ್ರೋತ್ಸವನ್ನು ಶ್ರೀರಾಜೇಶ್ ರವರ ಜಮೀನಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಕೆವಿಕೆಯ ಪ್ರಭಾರ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥೆಯಾದ ಶ್ರೀಮತಿ ಹೆಚ್.ವಿ. ದಿವ್ಯಾ, ಪಶು ವಿಜ್ಞಾನಿಯಾದ ಡಾ. ರಕ್ಷಿತ್ ರಾಜ್, ಶ್ರೀ ಶಾಮರಾಜ್ ರವರು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ೨೮ ರೈತ/ ರೈತ ಮಹಿಳೆಯರು ಭಾಗವಹಿಸಿದ್ದರು.


ತೆಂಗಿನ ಮರ ಹತ್ತುವ ಹಾಗೂ ಸಸ್ಯ ಸಂರಕ್ಷಣಾ ನಿರ್ವಹಣಾ ತರಬೇತಿ

ಸುತ್ತೂರಿನ ಐಸಿಎಆರ್ ಜೆಎಸ್ ಎಸ್ ಕೃಷಿ ವಿಜ್ಞಾನ ಕೇಂದ್ರ ಹಾಗೂ ನವದೆಹಲಿಯ ಭಾರತೀಯ ಕೃಷಿ ಕೌಶಲ್ಯ ಪರಿಷತ್ ವತಿಯಿಂದ ದಿನಾಂಕ 15 ಫೆಬ್ರವರಿಯಿಂದ 7 ಮಾರ್ಚ್ 2022 ರವರೆಗೆ 20 ದಿನಗಳ ವರೆಗೆ ನಡೆಯುವ ತೆಂಗಿನ ಮರ ಹತ್ತುವ ಹಾಗೂ ಸಸ್ಯ ಸಂರಕ್ಷಣಾ ನಿರ್ವಹಣೆ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು. ಸದರಿ ತರಬೇತಿಯಲ್ಲಿ ತೆಂಗು ಬೆಳೆಯ ನರ್ಸರಿ, ಸಮಗ್ರ ಪೋಷಕಾಂಶಗಳ ನಿರ್ವಹಣೆ, ಸಮಗ್ರ ಕೀಟ ಹಾಗೂ ರೋಗಗಳ ನಿರ್ವಹಣೆ ಕುರಿತು ಮಾಹಿತಿ ನೀಡಲಾಯಿತು. ತೆಂಗು ಮರವನ್ನು ಹತ್ತುವ ಉಪಕರಣದಿಂದ ತೆಂಗಿನ ಮರ ಹತ್ತುವ ಪ್ರಾಯೋಗಿಕ ತರಬೇತಿಯನ್ನು ಹಾಗೂ ಪ್ರಗತಿಪರ ತೆಂಗು ಬೆಳೆಗಾರರ ಕ್ಷೇತ್ರಕ್ಕೆ ಭೇಟಿ ನೀಡಲಾಯಿತು.


ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ದಿನಾಂಕ 8 ಮಾರ್ಚ್ 2022 ರಂದು ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ, ಮೈಸೂರು ವಿಭಾಗದ ಕ್ಷೇತ್ರ ಜನಸಂಪರ್ಕ ಕಾರ್ಯಾಲಯ, ಆತ್ಮಾ ಯೋಜನೆ, ಕೃಷಿ ಇಲಾಖೆ ಹಾಗೂ ಮೈಸೂರು ಅಧ್ಯಾಯದ ಕೃಷಿ ತಂತ್ರಜ್ಞರ ಸಂಸ್ಥೆಗಳ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು. ಬಿಳಿಗೆರೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶ್ರೀಮತಿ ಮಹಾದೇವಮ್ಮ ರಂಗಸ್ವಾಮಿ, ಮೈಸೂರು ವಿಭಾಗದ ಕ್ಷೇತ್ರ ಜನಸಂಪರ್ಕ ಕಾರ್ಯಾಲಯದ ಉಪ ನಿರ್ದೇಶಕರಾದ ಡಾ. ಟಿ.ಸಿ. ಪೂರ್ಣಿಮಾ, ಜೆಎಸ್ಎಸ್ಕೃಷಿ ವಿಜ್ಞಾನ ಕೇಂದ್ರದ ನಿವೃತ್ತ ಗೃಹ ವಿಜ್ಞಾನಿಯಾದ ಶ್ರೀಮತಿ ಎನ್ ಜಮುನಾ ಅರಸ್, ಶಿಶು ಅಭಿವೃದ್ಧಿ ಯೋಜನೆಯ ಹಿರಿಯ ಮೇಲ್ವಿಚಾರಕರಾದ ಶ್ರೀಮತಿ ಭಾಗ್ಯಶ್ರೀ ವೈ. ನೂಕಾಪುರ, ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಶ್ರೀ ಮಂಜುನಾಥ ಅಂಗಡಿ, ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಉಪ ಕೃಷಿ ನಿರ್ದೇಶಕ ಶ್ರೀ ಜೆ.ಹೆಚ್. ಯೋಗೇಶ್, ಸಹಾಯಕ ಕೃಷಿ ನಿರ್ದೇಶಕ ಶ್ರೀ ದೀಪಕ್. ಬಿ.ಎಸ್., ಜೆಎಸ್ಎಸ್ಜನ ಶಿಕ್ಷಣ ಸಂಸ್ಥೆಯ ನಿವೃತ್ತ ನಿರ್ದೇಶಕ ಶ್ರೀ ರಮೇಶ್, ಕೆವಿಕೆಯ ಗೃಹ ವಿಜ್ಞಾನಿ ಶ್ರೀಮತಿ ನೇತ್ರಾವತಿ ಎತ್ತಿನಮನಿ, ಪಶು ವಿಜ್ಞಾನಿ ಡಾ. ರಕ್ಷಿತ್ ರಾಜ್ ಯು.ಎಮ್. ಹಾಗು ೬೦ ಮಹಿಳೆಯರು, ಜೆಎಸ್ಎಸ್ ಕೆವಿಕೆಯ ಇತರೆ ಸಿಬ್ಬಂದಿಗಳು ಭಾಗವಹಿಸಿದ್ದರು. ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಯಶಸ್ವಿ ಮಹಿಳಾ ಉದ್ಯಮಿಯಾದ ಶ್ರೀಮತಿ ಜಯಲಕ್ಷ್ಮಿ ಯವರನ್ನು ಸನ್ಮಾನಿಸಲಾಯಿತು. ಸಿರಿಧಾನ್ಯಗಳ ಅಡುಗೆ ಸ್ಪರ್ಧೆ, ರಂಗೋಲಿ ಹಾಗೂ ಇತರೆ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.


ಕೃಷಿ ಬ್ಯಾಂಕ್ ಅಧಿಕಾರಿಗಳಿಗೆ ಹೈಟೆಕ್ ತೋಟಗಾರಿಕೆ ತರಬೇತಿ

ದಿನಾಂಕ 25 ಮಾರ್ಚ್ 2022 ರಂದು ಸುತ್ತೂರಿನ ಐಸಿಎಆರ್ ಜೆಎಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ ಹಾಗೂ ಬೆಂಗಳೂರಿನ ಐಐಎಚ್ಆರ್ ತೋಟಗಾರಿಕೆ ಸಂಸ್ಥೆಯ ಸಹಯೋಗದಲ್ಲಿ ಕೃಷಿ ಬ್ಯಾಂಕ್ ಅಧಿಕಾರಿಗಳಿಗೆ ಹೈಟೆಕ್ ತೋಟಗಾರಿಕೆ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಐಐಎಚ್ಆರ್ ಸಂಸ್ಥೆಯ ಪ್ರಧಾನ ವಿಜ್ಞಾನಿಯಾದ ಡಾ. ಸೇಂಥಿಲ್ ಕುಮಾರ್ ಹಾಗೂ ಜೆಎಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಹಾಯಕ (ಮಣ್ಣು ವಿಜ್ಞಾನ) ರಾದ ಶ್ರೀ ಜೆ.ಜಿ.ರಾಜಣ್ಣ ರವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಈ ತರಬೇತಿಯಲ್ಲಿ 35 ಸಿಬ್ಬಂದಿಗಳು ಭಾಗವಹಿಸಿದ್ದರು.


ಬುಡಕಟ್ಟು ಸಮುದಾಯದವರಿಗೆ ಮಣ್ಣು ಆರೋಗ್ಯ ಅಭಿಯಾನ

ದಿನಾಂಕ 18 ಮಾರ್ಚ್ 2022 ರಂದು ಎಚ್ ಡಿ ಕೋಟೆಯ ಸ್ವಾಮಿ ವಿವೇಕಾನಂದ ಯೂಥ್ ಮೂಮೆಂಟ್ ಹಾಗೂ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಕೆಂಚಮಳ್ಳಿ ಗ್ರಾಮದ ಬುಡಕಟ್ಟು ಸಮುದಾಯದವರಿಗೆ ಮಣ್ಣು ಆರೋಗ್ಯ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಅಭಿಯಾನದಲ್ಲಿ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಹಾಯಕ (ಮಣ್ಣು ವಿಜ್ಞಾನ) ರಾದ ಶ್ರೀ ಜೆ.ಜಿ.ರಾಜಣ್ಣ ರವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಣ್ಣು ಮಾದರಿ ಸಂಗ್ರಹಣೆ ಬಗ್ಗೆ ಪದ್ಧತಿ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ಈ ಕಾರ್ಯಕ್ರಮದಲ್ಲಿ 50 ಮಣ್ಣು ಮಾದರಿ ಸಂಗ್ರಹಿಸಲಾಯಿತು.


ಕೆವಿಕೆ, ಕೊಲ್ಹಾಪುರ್ ಗೆ ಭೇಟಿ

ದಿನಾಂಕ 14 ಮತ್ತು 15 ಮಾರ್ಚ್ 2022 ರಂದು ಮಹಾರಾಷ್ಟ್ರದ ಕನೇರಿ ಮಠಕ್ಕೆ ಸುತ್ತೂರು ಮಠದ ವತಿಯಿಂದ ಸುತ್ತೂರಿನ ಜೆಎಸ್ಎಸ್ ಸಂಸ್ಥೆಗಳ ಗೌರವ ಆಡಳಿತಾಧಿಕಾರಿಗಳಾದ ಶ್ರೀ ಎಸ್. ಪಿ. ಉದಯಶಂಕರ್ ರವರು, ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ-2 ರವರಾದ ಶ್ರೀ ಶಿವಕುಮಾರ ಸ್ವಾಮಿಗಳು, ಸುತ್ತೂರಿನ ಜೆಎಸ್ಎಸ್ ಸಂಸ್ಥೆಗಳ ಸಂಯೋಜನಾಧಿಕಾರಿಗಳು ಹಾಗೂ ಸಹ ಸಂಯೋಜನಾಧಿಕಾರಿಗಳು, ಇಂಜಿನಿಯರ್ ವಿಭಾಗದ ಮುಖ್ಯಸ್ಥರು, ಸಿಬ್ಬಂದಿಗಳು, ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಹಾಗೂ ಸಿಬ್ಬಂದಿಗಳು ಭೇಟಿ ನೀಡಿದರು. ಈ ಸಮಯದಲ್ಲಿ ಕನೇರಿ ಮಠದ ಕೃಷಿ ವಿಜ್ಞಾನ ಕೇಂದ್ರ, ಸಿದ್ಧಗಿರಿ ಗೋಶಾಲೆ, ಸಾವಯವ ಬೆಲ್ಲ ತಯಾರಿಸುವ ಘಟಕ, Lakhapati Kethi Model, ಎರೆಹುಳು ಗೊಬ್ಬರ, ಎರೆಜಲ, ಪಂಚಗವ್ಯ ಗೋಕೃಪಾಮೃತ ಉತ್ಪಾದನಾ ಘಟಕ, ಪಶು ಆಹಾರ ಉತ್ಪಾದನಾ ಘಟಕ, ಸಪ್ತದೇನು ಮಂದಿರ, ಸಿದ್ಧಗಿರಿ ಆಸ್ಪತ್ರೆ, ಸಿದ್ಧಗಿರಿ ಗುರುಕುಲ, ಸಿದ್ಧಗಿರಿ ಮ್ಯೂಸಿಯಂ, ಮಿರಾಕಲ್ ಗಾರ್ಡನ್ ಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.


ಕೃಷಿ ಯಂತ್ರೋಪಕರಣಗಳ ಮೇಳದಲ್ಲಿ ಭಾಗವಹಿಸುವಿಕೆ

ದಿನಾಂಕ 3೦ ಮಾರ್ಚ್ 2022 ರಂದು ವಿ.ಸಿ. ಫಾರಂ ಮಂಡ್ಯದಲ್ಲಿ ನಡೆದ ಕೃಷಿ ಯಂತ್ರೋಪಕರಣಗಳ ಮೇಳದಲ್ಲಿ ಸುತ್ತೂರಿನ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ಪ್ರಭಾರ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಶ್ರೀಮತಿ ದಿವ್ಯಾ ಹೆಚ್.ವಿ. ಹಾಗೂ ವಿಜ್ಞಾನಿಗಳಾದ ಶ್ರೀಮತಿ ನೇತ್ರಾವತಿ ಎತ್ತಿನಮನಿ, ಡಾ. ರಕ್ಷಿತ್ ರಾಜ್ ಯು.ಎಮ್. ಹಾಗೂ ಡಾ. ವಿನಯ್ ಜಿ. ಎಮ್. ರವರು ಭಾಗವಹಿಸಿ ಡ್ರೋನ್ ಬಳಸಿ ರಸಗೊಬ್ಬರಗಳನ್ನು ಸಿಂಪಡಣೆ ಮಾಡುವುದು ಹಾಗೂ ಇತರೆ ಕೃಷಿ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆ ವೀಕ್ಷಿಸಿ ಮಾಹಿತಿ ಸಂಗ್ರಹಿಸಿದರು.


ಹಕ್ಕುಗಳನ್ನು ಕಾಯ್ದಿರಿಸಿದೆ : ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ, ಸುತ್ತೂರು, ಮೈಸೂರು ಜಿಲ್ಲೆ ಭೇಟಿ ಸಂಖ್ಯೆ: