ಜೂನ್ 2020 and ಜುಲೈ 2020 ಕಾರ್ಯಕ್ರಮಗಳು
ವಿಶ್ವ ಪರಿಸರ ದಿನಾಚರಣೆದಿನಾಂಕ 05.06.2020 ರಂದು ಕೆವಿಕೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಶ್ರೀ ಎಂ. ಎನ್. ಶಿವಶಂಕರಪ್ಪ, ನಿರ್ದೇಶಕರು, ತೋಟಗಾರಿಕೆ ವಿಭಾಗ, ಜೆಎಸ್ಎಸ್ ಮಹಾವಿದ್ಯಾಪೀಠ, ಮೈಸೂರು ರವರು ಗಿಡ ನೆಡುವುದರೊಂದಿಗೆ ಆಚರಿಸಲಾಯಿತು. 25 ರೈತರು ಹಾಗೂ ಸಿಬ್ಬಂದಿವರ್ಗದವರು ಸದರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. |
ಪತ್ರಿಕೆಯಲ್ಲಿ ವರದಿವಿಶ್ವ ಪರಿಸರ ದಿನಾಚರಣೆಯ ವರದಿಯನ್ನು ಮೈಸೂರು ಮಿತ್ರ ಪತ್ರಿಕೆಯ ಪುಟ ಸಂಖ್ಯೆ 2ರಲ್ಲಿ ಲಿ ಪ್ರಕಟಿಸಲಾಗಿದೆ. |
ಕರ್ನಾಟಕದ ಕೃಷಿ ಮಂತ್ರಿಗಳೊಂದಿಗೆ ವಿಡಿಯೇ ಸಂವಾದಶ್ರೀ ಬಿ.ಸಿ. ಪಾಟೀಲ್, ಕೃಷಿ ಮಂತ್ರಿಗಳು, ಕರ್ನಾಟಕ ಸರ್ಕಾರ ರವರು ನಿರ್ದೇಶಕರು, ಐಸಿಎಆರ್ ಅಟಾರಿ, ಬೆಂಗಳೂರು ಮುಖೇನ ಕರ್ನಾಟಕದ ಎಲ್ಲಾ ಕೆವಿಕೆಗಳ ಜೊತೆ ಸಂವಾದವನ್ನು ನಡೆಸಿದರು. |
ಉದ್ದು ಬೆಳೆ ಕ್ಷೇತ್ರೋತ್ಸವಐಐಪಿಆರ್, ಕಾನ್ಪುರ ಪ್ರಾಯೋಜಿತ ದ್ವಿದಳ ಬೆಳಗಳ ಬೀಜೋತ್ಪಾದನೆ ಯೋಜನೆಯಡಿಯಲ್ಲಿ ಉದ್ದು ಬೆಳೆ ಕ್ಷೇತ್ರೋತ್ಸವನ್ನು ಟಿ.ನರಸೀಪುರ ತಾಲೂಕಿನ ನೀಲಸೋಗೆ ಗ್ರಾಮದಲ್ಲಿ ದಿನಾಂಕ 16 ಜೂನ್ 2020 ರಂದು ಹಮ್ಮಿಕೊಳ್ಳಲಾಗಿತ್ತು. ಮೈಸೂರಿನ ನಾಗಹಳ್ಳಿ ಕೃಷಿ ವಿಸ್ತರಣಾ ಘಟಕದ ವಿಸ್ತರಣಾ ನಿರ್ದೇಶಕರಾದ ಡಾ. ಎಂ. ಬೈರೇಗೌಡ, ಕೃಷಿ ಇಲಾಖೆ ಅಧಿಕಾರಿಗಳು ಮತ್ತು 48 ಗ್ರಾಮಸ್ಥರು ಕ್ಷೇತ್ರೋತ್ಸವದಲ್ಲಿ ಭಾಗವಹಿಸಿದ್ದರು. |
ಪತ್ರಿಕೆಯಲ್ಲಿ ವರದಿಟಿ.ನಸೀಪುರ ತಾಲೂಕಿನ ನೀಲಸೋಗೆ ಗ್ರಾಮದಲ್ಲಿ ಜರುಗಿದ ಉದ್ದು ಬೆಳೆಯಲ್ಲಿ ಕ್ಷೇತ್ರೋತ್ಸವದ ವರದಿಯು ಆಂದೋಲನ, ವಾರ್ತಾಭಾರತಿ, ವಿಶ್ವವಾಣಿ, ಕನ್ನಡ ಪ್ರಭ ಹಾಗೂ ಪ್ರಜಾವಾಣಿಯಲ್ಲಿ ಪ್ರಕಟಗೊಂಡಿರುತ್ತದೆ. |
ನವಣೆ ತಳಿ DHFt 109-3- ತರಬೇತಿ ಹಾಗೂ ಪ್ರಾತ್ಯಕ್ಷಿಕೆನವಣೆ ತಳಿ DHFt 109-3ಯ ಮಧುಮೇಹ ಮಿಶ್ರಣದ ಒಂದು ದಿನದ ತರಬೇತಿ ಹಾಗೂ ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಳ್ಳಲಾಗಿತ್ತು. 57 ರೈತರು ಹಾಗೂ ರೈತಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕೋವಿಡ್ 19ರ ಕಾರಣ ತರಬೇತಿಗೆ ಹಾಜರಾದ ರೈತರಿಗೆ ಮಾಸ್ಕ್ ಹಾಗೂ ಸೈನಿಟೈರ್ ಬಳಕೆ ಕುರಿತು ಮಾಹಿತಿ ನೀಡಲಾಯಿತು. |
ಭತ್ತದ ಬೀಜೋತ್ಪಾದನೆ ತಾಂತ್ರಿಕತೆಗಳು ಕುರಿತ ಕಾರ್ಯಾಗಾರಸುತ್ತೂರಿನ ಕೆವಿಕೆಯಲ್ಲಿ ಭತ್ತದ ಬೀಜೋತ್ಪಾದನೆ ತಾಂತ್ರಿಕತೆಗಳು ಕುರಿತ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಮಂಡ್ಯದ ವಿ.ಸಿ. ಫಾರಂನ ಪ್ರಾಧ್ಯಾಪಕರಾದ ಡಾ. ಎನ್. ಶಿವಕುಮಾರ್ ರವರು ಮಾತನಾಡಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಹೆಚ್ಚು ಇಳುವರಿ ಕೊಡುವ ತಳಿಗಳು ಹಾಗೂ ಸಂಕರಣ ತಳಿಗಳನ್ನು ಪರಿಚಯಿಸಲಾಗಿದೆ, ರೈತರು ಅವುಗಳ ಸದುಪಯೋಗವನ್ನು ಹೊಂದುವಂತೆ ಕರೆ ನೀಡಿದರು. ಹೈದರಾಬಾದ್ ಇಕ್ರಿಸ್ಯಾಟ್ ವಿಜ್ಞಾನಿಯಾದ ಡಾ. ಅರುಣ್ ಬಳಮಟ್ಟಿಯವರು ಕೃಷಿಯಲ್ಲಿ ಉದ್ಯಮಶೀಲತೆ ಕುರಿತು ಮಾತನಾಡಿದರು. 25 ಪ್ರಗತಿಪರ ರೈತರು ಕಾರ್ಯಾಗರದಲ್ಲಿ ಭಾಗವಹಿಸಿದ್ದರು |
ಪತ್ರಿಕೆಯಲ್ಲಿ ವರದಿಸುತ್ತೂರಿನ ಕೆವಿಕೆಯಲ್ಲಿ ಭತ್ತದ ಬೀಜೋತ್ಪಾದನೆ ತಾಂತ್ರಿಕತೆಗಳು ಕುರಿತ ಒಂದು ದಿನದ ಕಾರ್ಯಾಗಾರದ ವರದಿಯನ್ನು ಆಂದೋಲನ ಹಾಗೂ ವಿಜಯವಾಣಿಯಲ್ಲಿ ಪ್ರಕಟಿಸಲಾಗಿತ್ತು. |
DSR ಪದ್ಧತಿಯಡಿಯಲ್ಲಿ ಭತ್ತದ ಸಮಗ್ರ ಬೆಳೆ ನಿರ್ವಹಣೆ ಕುರಿತು ತರಬೇತಿಭತ್ತ ಬೆಳೆಯಲ್ಲಿ ನೇರ ಬಿತ್ತನೆ ಪದ್ಧತಿಯಡಿ ಸಮಗ್ರ ಬೆಳೆ ನಿರ್ವಹಣೆ ಹಾಗೂ ಸಮಗ್ರ ಕೀಟ ಹಾಗೂ ರೋಗ ನಿರ್ಹವಣೆ ಕಾರ್ಯಕ್ರಮವನ್ನು ಹೆಚ್.ಡಿ. ಕೋಟೆ ತಾಲೂಕಿನ ನಿಲುವಾಗಿಲು ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು. 27 ರೈತರು ತರಬೇತಿಯ ಸದುಪಯೋಗವನ್ನು ಪಡೆದುಕೊಂಡರು. |
ಎಸ್ಸಿ-ಎಸ್ಟಿ ಯೋಜನೆಯ ತರಬೇತಿ ಕಾರ್ಯಕ್ರಮಭಾರತೀಯ ರೈಸ್ ಸಂಶೋಧನಾ ಸಂಸ್ಥೆ (IIRR), ಹೈದರಬಾದ್ ವತಿಯಿಂದ ಮಂಜೂರಾಗಿರುವ ಎಸ್ಸಿ-ಎಸ್ಟಿ ನೇರ ಭತ್ತದ ಬಿತ್ತನೆ ಯೋಜನೆಯಡಿಯಲ್ಲಿ ತರಬೇತಿ ಕಾರ್ಯಕ್ರಮವನ್ನು ನಂಜನಗೂಡು ತಾಲೂಕಿನ ದೇಬೂರು ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸದರಿ ತರಬೇತಿ ಕಾರ್ಯಕ್ರಮದಲ್ಲಿ ಬೀಜೋಪಚಾರ, ಸಮಗ್ರ ಬೆಳೆ ಹಾಗೂ ಪೀಡೆ ನಿರ್ವಹಣೆ ಕುರಿತು ಮಾಹಿತಿ ನೀಡಲಾಯಿತು. 30 ರೈತರು ಕಾರ್ಯಕ್ರಮದ ಪ್ರಯೋಜನ ಪಡೆದರು. |









