ಐಸಿಎಆರ್ ಜೆಎಸ್ಎಸ್ ಕೆವಿಕೆಗೆ ಸುಸ್ವಾಗತ
ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ (ಜೆಎಸ್ಎಸ್ ಕೆವಿಕೆ) ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್ ಅನುದಾನದೊಂದಿಗೆ ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ರೈತರಿಗೆ ತಂತ್ರಜ್ಞಾನ ವರ್ಗಾವಣೆ ಮಾಡುವ ಯೋಜನೆಯಾಗಿದೆ. ಕೃಷಿ ವಿಜ್ಞಾನ ಕೇಂದ್ರವು ಬೇಸಾಯ ಶಾಸ್ತ್ರ, ಸಸ್ಯ ಸಂರಕ್ಷಣೆ , ತೋಟಗಾರಿಕೆ, ಬೀಜ ತಂತ್ರಜ್ಞಾನ, ಪಶು ಸಂಗೋಪನೆ, ಗೃಹ ವಿಜ್ಞಾನ ಮತ್ತು ಮಣ್ಣು ವಿಜ್ಞಾನ ಮುಂತಾದ ವಿಷಯಗಳ ಕುರಿತು ರೈತರಿಗೆ ಮಾಹಿತಿ ನೀಡಲಾಗುವುದು.
ದೃಷ್ಟಿ, ಗುರಿ & ಧ್ಯೇಯೋದ್ದೇಶ
- ಸ್ಥಳೀಯವಾಗಿ ಸೂಕ್ತವಾಗುವ ನೈಸರ್ಗಿಕ ಸಂಪನ್ಮೂಲಗಳಾದ ಮಣ್ಣು, ನೀರು ಹಾಗೂ ಜೀವವೈವಿಧ್ಯಗಳ ಸುಸ್ಥಿರ ಬಳಕೆ ಹಾಗೂ ಸಂರಕ್ಷಣೆಗೆ ಒತ್ತುಕೊಡುವ ಕೃಷಿ ಭೂ ಬಳಕೆ ವ್ಯವಸ್ಥೆಗೆ ಸೂಕ್ತ ತಂತ್ರಜ್ಞಾನವನ್ನು ಗುರುತಿಸಲು ರೈತರ ತಾಕುಗಳಲ್ಲಿ ತಂತ್ರಜ್ಞಾನ ಪರೀಕ್ಷೆಗಳನ್ನು ನಡೆಸುವುದು
- ಕೃಷಿ ಉತ್ಪಾದಕತೆ ಹಾಗೂ ಉತ್ಪಾದನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿವಿಧ ಬೆಳೆ ಪದ್ಧತಿಯಲ್ಲಿ ಕ್ಷೇತ್ರಮಟ್ಟದಲ್ಲಿ ಪ್ರಯೋಗ ಹಾಗೂ ಮುಂಚೂಣಿ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸುವುದು
- ಕೃಷಿ ಸಂಶೋಧನೆಯ ನವನವೀನ ತಂತ್ರಜ್ಞಾನಗಳ ಬಗ್ಗೆ ರೈತರು, ಯುವಕರು, ಮಹಿಳೆಯರು ಹಾಗೂ ವಿಸ್ತರಣಾ ಸಿಬ್ಬಂದಿಗೆ ತರಬೇತಿ ಕಾರ್ಯಕ್ರಮಗಳನ್ನು ಏರ್ಪಡಿಸುವುದು
- ಅಧಿಕ ಉತ್ಪಾದನೆಗೆ ಮತ್ತು ಸ್ವ-ಉದ್ಯೋಗಕ್ಕೆ (ಕೃತಿಯಿಂದ ಕಲಿಕೆಯ ಬಗ್ಗೆ) ಒತ್ತು ನೀಡಿ ರೈತರಿಗೆ ಹಾಗೂ ಗ್ರಾಮೀಣ ಯುವಕರಿಗೆ ಕೃಷಿ ಮತ್ತು ಸಂಬಂಧಿತ ವಿಷಯಗಳಲ್ಲಿ ಅಲ್ಪಾವಧಿ ಹಾಗೂ ಧೀರ್ಘಾವಧಿ ವೃತ್ತಿಪರ ತರಬೇತಿ ಕಾರ್ಯಕ್ರಮಗಳನ್ನು ಏರ್ಪಡಿಸುವುದು.
- ಉತ್ತಮ ಗುಣಮಟ್ಟದ ಬೀಜ, ಸಸಿಗಳು, ಜೈವಿಕ ಉತ್ಪನ್ನಗಳನ್ನು ಸಕಾಲದಲ್ಲಿ ಒದಗಿಸುವುದು.
Agri Clinic
2013 ರಲ್ಲಿ ಸ್ಥಾಪಿತವಾದ ಜೆಎಸ್ಎಸ್ ಅಗ್ರಿ ಕ್ಲಿನಿಕ್ ಮುಖ್ಯವಾಗಿ ಕೃಷಿಯಲ್ಲಿ ರಸಗೊಬ್ಬರಗಳ ಬಳಕೆ ಕಡಿಮೆ ಮಾಡುವುದು ಮತ್ತು ಈ ಮೂಲಕ ಕೃಷಿ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವುದು. ಅಗ್ರಿ ಡಾಕ್ಟರ್ ರಿಂದ ಸೂಕ್ತವಾದ ತಾಂತ್ರಿಕ ಮಾಹಿತಿಯನ್ನು ನೀಡುವುದು.
Read More >>»