ಆಗಸ್ಟ್ 2020 and ಸೆಪ್ಟೆಂಬರ್ 2020 ಕಾರ್ಯಕ್ರಮಗಳು


ಬಲರಾಮ ಜಯಂತಿ ಮತ್ತು ಕಿಸಾನ್ ಸಮ್ಮಾನ್ ನಿಧಿ ನೇರ ಕಾರ್ಯಕ್ರಮ

ಕಿಸಾನ್ ಸಮ್ಮಾನ್ ನಿಧಿ ನೇರ ಕಾರ್ಯಕ್ರಮವನ್ನು ದಿನಾಂಕ 09.09.2020 ರಂದು ಕೆವಿಕೆಯಲ್ಲಿ ಆಯೋಜಿಸಲಾಗಿತ್ತು. ಮಾನ್ಯ ಪ್ರದಾನ ಮಂತ್ರಿಯವರು ರೈತರೊಂದಿಗೆ ಹಾಗೂ ರೈತ ಸಹಕಾರ ಸಂಘಗಳೊಂದಿಗೆ ಸಂವಾದ ನಡೆಸಿದರು. ಇದೇ ಸಮಯದಲ್ಲಿ ಬಲರಾಮ ಜಯಂತಿಯನ್ನು ಆಚರಿಸಲಾಯಿತು. 132 ರೈತರು ಹಾಗೂ ರೈತ ಮಹಿಳೆಯರು ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ಎಸ್ಸಿ-ಎಸ್ಟಿ ಯೋಜನೆಯ ತರಬೇತಿ ಕಾರ್ಯಕ್ರಮ

ಭಾರತೀಯ ರೈಸ್ ಸಂಶೋಧನಾ ಸಂಸ್ಥೆ (IIRR), ಹೈದರಬಾದ್ ವತಿಯಿಂದ ಮಂಜೂರಾಗಿರುವ ಎಸ್ಸಿ-ಎಸ್ಟಿ ನೇರ ಭತ್ತದ ಬಿತ್ತನೆ ಯೋಜನೆಯಡಿಯಲ್ಲಿ ತರಬೇತಿ ಕಾರ್ಯಕ್ರಮವನ್ನು 06-08 ಡಿಸೆಂಬರ್ 2020 ಅವಧಿಯಲ್ಲಿ ದೊಡ್ಡಕಾನ್ಯ, ಹೊಸಹಳ್ಳಿ, ಜೀಮಾರಹಳ್ಳಿ, ಮೂಡಹಳ್ಳಿ ಹಾಗೂ ದೇಬೂರು ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸದರಿ ತರಬೇತಿ ಕಾರ್ಯಕ್ರಮದ ಪ್ರಯೋಜನವನ್ನು 120 ರೈತರು ಪಡೆದರು.


ನಿರ್ದೇಶಕರು, ಐಸಿಎಆರ್, ಬೆಂಗಳೂರು ರವರ ಕೆವಿಕೆಯ ಭೇಟಿ

ಡಾ. ವೆಂಕಟಸುಬ್ರಮಣ್ಯನ್, ನಿರ್ದೇಶಕರು, ಐಸಿಎಆರ್, ಬೆಂಗಳೂರು ರವರು ಕೆವಿಕೆಗೆ ದಿನಾಂಕ 12.08.2020 ರಂದು ಭೇಟಿ ನೀಡದರು. ನಿರ್ದೇಶಕರ ಭೇಟಿ ಸಮಯದಲ್ಲಿ ಕೆವಿಕೆಯ ಫಾರಂಗಳು, ಪ್ರಾತ್ಯಕ್ಷಿಕಾ ಘಟಕಗಳಿಗೆ ಭೇಟಿ ನೀಡಿದರು. ಸಿಬ್ಬಂದಿವರ್ಗದರೊಂದಿಗೆ ನಿಗಧಿತ ಕಾರ್ಯಕ್ರಮಗಳ ಅನುಷ್ಟಾನಗೊಳಿಸುತ್ತಿರುವ ಕುರಿತು ಚರ್ಚಿಸಿದರು.


ಕೌಶಲ್ಯ ಭಾರತ ತರಬೇತಿ ಕಾರ್ಯಕ್ರಮ

ಕೃಷಿ ಕೌಶಲ್ಯ ಭಾರತ ಪರಿಷತ್ತು ರವರ ಸಹಯೋಗದೊಂದಿಗೆ ಗ್ರಾಮೀಣ ಯುವಕರಿಗೆ ತೆಂಗಿನ ಮರಹತ್ತುವ ಕಾರ್ಯಕ್ರಮವನ್ನು 20 ಗ್ರಾಮೀಣ ಯುವಕರಿಗೆ ಹಮ್ಮಿಕೊಳ್ಳಲಾಗಿತ್ತು. ಸದರಿ ತರಬೇತಿ ಕಾರ್ಯಕ್ರಮದ ಪರೀಕ್ಷೆಯನ್ನು ನಡೆಸಲಾಗಿತ್ತು. ಪರಿಷತ್ತಿನ ಪರವಾಗಿ ಪರಿಕ್ಷಕರಾಗಿ ಶ್ರೀ ಮೊಹಮದ್ ನಿಹಾದ್ ಅಸರ್ ಹಾಗೂ ಡಾ. ಅರುಣ್ ಬಳಮಟ್ಟಿಯವರು ಆಗಮಿಸಿ, ಪರೀಕ್ಷೆಯನ್ನು ನಡೆಸಿಕೊಟ್ಟರು.


ರಾಗಿ ಮತ್ತು ಅಲಸಂದೆ ತರಬೇತಿ ಕಾರ್ಯಕ್ರಮ

ರಾಗಿ ತಳಿ ಕೆಎಂಆರ್ 630 ಮತ್ತು ಅಲಸಂದೆ ತಳಿ ಪಿ.ಹೆಚ್.ಜಿ 9 ಕುರಿತ ತರಬೇತಿ ಕಾರ್ಯಕ್ರಮವನ್ನು ದಿನಾಂಕ 28.08.2009 ರಂದು ಕೆ.ಆರ್. ನಗರ ತಾಲೂಕಿನ ಅರಕೆರೆ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು. ತರಬೇತಿ ಕಾರ್ಯಕ್ರಮದಲ್ಲಿ ಮಣ್ಣು ಪರೀಕ್ಷೆಗೆ ಮಣ್ಣು ಸಂಗ್ರಹಿಸುವ ಬಗೆ, ರಸಗೊಬ್ಬರಗಳ ಬಳಕೆ, ಸಮಗ್ರ ರೋಗ ಹಾಗೂ ಕೀಟಗಳ ಕುರಿತು ಮಾಹಿತಿ ನೀಡಲಾಯಿತು. ಕಾರ್ಯಕ್ರಮದಲ್ಲಿ 30 ರೈತರು ಭಾಗವಹಿಸಿದ್ದರು.


Training programme on INM and IPM in Banana

Training programme on INM and IPM in Banana has been conducted on 05.09.2020 at Magudilu, H.D. Kote Taluk. During the programme the integrated crop management and management of diseases and pests in banana were explained. 33 farmers were present in the programme.


ಮೆಕ್ಕೆ ಜೋಳ ತರಬೇತಿ ಕಾರ್ಯಕ್ರಮ

ದಿನಾಂಕ 05.09.2020 ರಂದು ಸುತ್ತೂರಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮೆಕ್ಕೆ ಜೋಳ ಬೆಳೆಯಲ್ಲಿ ಸಮಗ್ರ ಬೆಳೆ ನಿರ್ವಹಣೆ ಕುರಿತು ತರಬೇತಿ ನೀಡಲಾಯಿತು. ತರಬೇತಿಯಲ್ಲಿ ಸಮಗ್ರ ಬೆಳೆ ಪೋಷಣೆ ಜೊತೆಗೆ ಮೌಲ್ಯವರ್ಧನೆ ಕುರಿತು ಪದ್ಧತಿ ಪ್ರಾತ್ಯಕ್ಷಿಕೆ ಮೂಲಕ ತರಬೇತಿಯನ್ನು ನೀಡಲಾಯಿತು. ಸದರಿ ತರಬೇತಿ ಕಾರ್ಯಕ್ರಮದಲ್ಲಿ 3 ವಿವಿಧ ಮಹಿಳಾ ಸ್ವಸಹಾಯ ಸಂಘದಿಂದ 33 ರೈತ ಮಹಿಳೆಯರು ಭಾಗವಹಿಸಿದ್ದರು.


ಬಿಳಿ ರಾಗಿ ತಳಿ ಕೆಎಂಆರ್ 340 ತರಬೇತಿ ಕಾರ್ಯಕ್ರಮ

ಕೆ.ಆರ್. ನಗರ ತಾಲೂಕಿನ ಅರಕೆರೆ ಗ್ರಾಮದಲ್ಲಿ ಬಿಳಿ ರಾಗಿಯ ತಳಿ ಕೆಎಂಆರ್ 340ರ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ತರಬೇತಿಯಲ್ಲಿ ತಳಿ ಪರಿಚಯ, ಸಮಗ್ರ ಬೆಳೆ ನಿರ್ವಹಣೆ ಮತ್ತು ಮೌಲ್ಯವರ್ಧನೆ ಕುರಿತು ಮಾಹಿತಿ ನೀಡಲಾಯಿತು. 30 ಜನ ರೈತರು ಹಾಗೂ ರೈತ ಮಹಿಳೆಯರು ಭಾಗವಹಿಸಿದ್ದರು.


ಮಣ್ಣು ಆರೋಗ್ಯ ಅಭಿಯಾನ

ಸಾವಯಕೃಷಿಯನ್ನು ಪ್ರಚೂರಪಡಿಸಲು ಭಾರತ ಸರ್ಕಾರವು ಪರಂಪರಾಗತ ಕೃಷಿ ವಿಕಾಸ ಯೋಜನೆ (Paramparagatha Krishi Vikas Yojana-PKVY)ಯನ್ನು ಹಮ್ಮಿಕೊಂಡಿದೆ. ಈ ಯೋಜನೆಯನ್ನು ಹೆಚ್.ಡಿ.ಕೋಟೆ ತಾಲೂಕಿನ ಚಾಕಹಳ್ಳಿಯಲ್ಲಿ 30 ರೈತರ ಜಮೀನಿನಲ್ಲಿ ಅನುಷ್ಟಾನಗೊಳಿಸಲಾಗಿದೆ. ಸದರಿ ರೈತರ ಜಮೀನಿನ ಮಣ್ಣು ಸಂಗ್ರಹಿಸಿ, ಪರೀಕ್ಷೆಗೊಳಪಡಿಸಿ ಮಣ್ಣು ಆರೋಗ್ಯ ಪತ್ರವನ್ನು ವಿತರಿಸಲಾಯಿತು ಹಾಗೂ ಗ್ರಾಮದ ಇತರೆ ರೈತಭಾಂದವರಿಗೂ ಸಹ ಮಣ್ಣು ಪರೀಕ್ಷೆ ಮಾಡಿಸಿಕೊಳ್ಳಲು ಸೂಚಿಸಲಾಯಿತು.


ಪೋಷಣ್ ಅಭಿಯಾನದ ಅಂಗವಾಗಿ ಸಮತೋಲನ ಆಹಾರ ಹಾಗೂ ಪೌಷ್ಟಿಕ ಕೈತೋಟ ತರಬೇತಿ

ಭಾರತ ಸರ್ಕಾರವು ಸೆಪ್ಟೆಂಬರ್ 2020 ಮಾಸವನ್ನು ಪೌಷ್ಟಿಕ ತಿಂಗಳೆಂದು ಘೋಷಿಸಿದ್ದು ಈ ತಿಂಗಳಲ್ಲಿ ಮಹಿಳೆಯರು ಹಾಗೂ ಮಕ್ಕಳ ಪೌಷ್ಟಿಕ ಮಟ್ಟವನ್ನು ಉತ್ತಮ ಪಡಿಸುವುದು ಹಾಗೂ ಅಪೌಷ್ಟಿಕತೆಯನ್ನು ಕಡಿಮೆಗೊಳಿಸುವ ಸಲುವಾಗಿ ಪೌಷ್ಟಿಕ ಅರಿವು ಕಾರ್ಯಗಾರವನ್ನು ದಿನಾಂಕ 17.09.2020 ರಂದು ಹಮ್ಮಿಕೊಳ್ಳಲಾಗಿತ್ತು. ಸದರಿ ಕಾರ್ಯಾಗಾರದಲ್ಲಿ ಸೂಕ್ಷ್ಮ ಪೋಷಕಾಂಶಗಳ ಕೊರತೆ ನೀಗಿಸಲು ಸೇವಿಸಬಹುದಾದ ಆಹಾರಗಳು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹಣ್ಣು ಮತ್ತು ತರಕಾರಿಗಳ ಸೇವನೆ, ರಕ್ತಹೀನತೆ ತಡೆಯಲು ತೆಗೆದುಕೊಳ್ಳಬಹುದಾದ ಆಹಾರಗಳು, ಕೈತೋಟದ ನಿರ್ಮಾಣ ಹಾಗೂ ನಿರ್ವಹಣೆ ಕುರಿತು ಜೆಎಸ್ಎಸ್ ಕೆವಿಕೆಯಲ್ಲಿ ಹಾಗೂ ನಂಜನಗೂಡು ತಾಲೂಕಿನ ಅತ್ತೂರು ಗ್ರಾಮದಲ್ಲಿ ಮಾಹಿತಿ ನೀಡಲಾಯಿತು. ತರಬೇತಿಯಲ್ಲಿ 83 ಅಂಗನವಾಡಿ ಕಾರ್ಯಕರ್ತೆಯರು ಹಾಗೂ ರೈತ ಮಹಿಳೆಯರು ಭಾಗವಹಿಸಿದ್ದರು.


ತಾರಸಿ ತೋಟ ಹಾಗೂ ಫಿನೈಲ್ ತಯಾರಿಕೆ ತರಬೇತಿ

ದಿನಾಂಕ 23-24 ಸೆಪ್ಟೆಂಬರ್ 2020ರಂದು ಸುತ್ತೂರಿನ ಪ್ರಾಥಮಿಕ ಹಾಗೂ ಪ್ರೌಡಶಾಲಾ ಶಿಕ್ಷಕರಿಗೆ ತಾರಸಿ ತೋಟ ಹಾಗೂ ಫಿನೈಲ್ ತಯಾರಿಕೆ ಕುರಿತು ತರಬೇತಿಯನ್ನು ನೀಡಲಾಯಿತು. ಸದರಿ ಕಾರ್ಯಕ್ರಮದಲ್ಲಿ ಹಣ್ಣು ಮತ್ತು ತರಕಾರಿಗಳ ಸೇವನೆಯ ಮಹತ್ವ, ತಾರಸಿ ತೋಟದ ಲಾಭಗಳು, ಜೈವಿಕ ವಿಧಾನಗಳಿಂದ ಕೀಟ ಹಾಗೂ ರೋಗಗಳನ್ನು ತಡೆಯುವ ವಿಧಾನ ಕುರಿತು ಮಾಹಿತಿ ನೀಡಲಾಯಿತು. ಫಿನೈಲ್ ತಯಾರಿಕೆ ತರಬೇತಿಯನ್ನು ಪ್ರಾತ್ಯಕ್ಷಿಕೆಯ ಮೂಲಕ ಮಾಹಿತಿ ನೀಡಲಾಯಿತು. 70 ಶಿಕ್ಷಕರು ಸದರಿ ತರಬೇತಿಯ ಪ್ರಯೋಜನವನ್ನು ಪಡೆದರು.

ಹಕ್ಕುಗಳನ್ನು ಕಾಯ್ದಿರಿಸಿದೆ : ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ, ಸುತ್ತೂರು, ಮೈಸೂರು ಜಿಲ್ಲೆ                    ಭೇಟಿ ಸಂಖ್ಯೆ: