ಡಿಸೆಂಬರ್‌ 2021 ಹಾಗೂ ಜನವರಿ 2022ರ ಕಾರ್ಯಕ್ರಮಗಳು


ಕೃಷಿ ತಂತ್ರಜ್ಞಾನಗಳ ಸಪ್ತಾಹ

ಸುತ್ತೂರು ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ರೈತರಿಗೆ ಮತ್ತು ರೈತ ಮಹಿಳೆಯರಿಗೆ ಕೃಷಿ ತಂತ್ರಜ್ಞಾನಗಳ ಬಗ್ಗೆ ಅರಿವು ಮೂಡಿಸಲು 2 ರಿಂದ 8 ಡಿಸೆಂಬರ್ 2021 ರವರೆಗೆ ಆಯೋಜಿಸಲಾದ ತಂತ್ರಜ್ಞಾನ ಸಪ್ತಾಹದ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ರೈತರಿಗೆ ಹೈನೋದ್ಯಮದ ಬಗ್ಗೆ ತರಬೇತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಭಾರ ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರಾದ ಶ್ರೀಮತಿ ಹೆಚ್.ವಿ. ದಿವ್ಯಾ, ಸಿಬ್ಬಂದಿಗಳು ಹಾಗೂ ಧರ್ಮಸ್ಥಳ ಹಾಗೂ ಹ್ಯಾಂಡ್ ಇನ್ ಹ್ಯಾಂಡ್ ಸಂಘದ 48 ರೈತ/ರೈತ ಮಹಿಳೆಯರು ಭಾಗವಹಿಸಿದ್ದರು. 30 ರೈತರ ಮಹಿಳೆಯರು ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ಕೃಷಿಯಲ್ಲ ಮಹಿಳೆ ದಿನಾಚರಣೆ

ದಿನಾಂಕ 4 ಡಿಸೆಂಬರ್ 2021 ರಂದು ಸುತ್ತೂರಿನ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರವು ಈಶಾ ಔಟ್‌ ರೀಚ್ ಹಾಗೂ ಮಲ್ಲಯ್ಯನಗಿರಿ ರೈತರ ಉತ್ಪಾದಕ ಕಂಪನಿ ಮತ್ತು ಮೈಸೂರಿನ ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ ಸಹಯೋಗದೊಂದಿಗೆ ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ ಹೋಬಳಿಯ ಎಸ್‌ಎಂಎಸ್ ಕಾನ್ವೆಂಟ್ ಹಾಲ್‌ನಲ್ಲಿ ಕೃಷಿಯಲ್ಲಿ ಮಹಿಳೆ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಈಶಾ ಫೌಂಡೇಶನ್‌ನ ಗುರೂಜಿ ಶ್ರೀ ಧೀರಜ್ ರವರು, ಬೆಟ್ಟದಪುರದ ಮಲ್ಲಯ್ಯನಗಿರಿ ರೈತರ ಉತ್ಪಾದಕ ಕಂಪನಿಯ ಅಧ್ಯಕ್ಷರಾದ ಶ್ರೀ ಬಿ.ವಿ. ಮಂಜುನಾಥ್, ಮೈಸೂರಿನ ಕೃಷಿ ತಂತ್ರಜ್ಞಾನ ಸಂಸ್ಥೆಯ ಯೋಜನಾ ಉಪನಿರ್ದೇಶಕರಾದ ಶ್ರೀಮತಿ ಹೆಚ್.ಪಿ. ಕುಮುದಾ, ಪಿರಿಯಾಪಟ್ಟಣದ ನಾರಿ ಗೃಹೋತ್ಪನ್ನಗಳ ಸಂಚಾಲಕರಾದ ಶ್ರೀಮತಿ ಕೆ.ಪಿ. ಆಶಾಕುಮಾರಿ, ಮಲ್ಲಯ್ಯನಗಿರಿ ರೈತ ಉತ್ಪಾದಕ ಕಂಪನಿಯ ನಿರ್ದೇಶಕರಾದ ಶ್ರೀ ಸಿ.ಪಿ. ರಘು, ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ಪ್ರಭಾರ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಶ್ರೀಮತಿ ಹೆಚ್.ವಿ. ದಿವ್ಯಾರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪ್ರಗತಿಪರ ರೈತ ಮಹಿಳೆ ಶ್ರೀಮತಿ ವಿಜಯಕುಮಾರಿಯವರಿಗೆ ಸನ್ಮಾನಿಸಲಾಯಿತು ಹಾಗೂ ರೈತ ಮಹಿಳೆಯರಿಗೆ ವಿವಿಧ ಜಾತಿಯ ಸಸ್ಯಗಳನ್ನು ಗುರುತಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.


ಕ್ಷೇತ್ರೋತ್ಸವ

ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ದಿನಾಂಕ 07.12.2021 ರಂದು ಹೆಚ್.ಡಿ. ಕೋಟೆ ತಾಲ್ಲೂಕಿನ ಮಾಗುಡಿಲು ಗ್ರಾಮದಲ್ಲಿ ಭತ್ತ (ಕೆಎಂಪಿ 220, ಎಂಎಸ್‌ಎನ್ 99), ಉದ್ದು (ಎಲ್‌ಬಿಜಿ 791) ಹಾಗೂ ಅಲಸಂದೆ (ಕೆಬಿಸಿ 9) ಬೆಳೆಗಳ ಕ್ಷೇತ್ರೋತ್ಸವವನ್ನು ತಂತ್ರಜ್ಞಾನ ಸಪ್ತಾಹದ ಅಂಗವಾಗಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿದ ಮಾಗುಡಿಲು ಗ್ರಾಮದ ಪ್ರಗತಿಪರ ರೈತರಾದ ಶ್ರೀ ಚನ್ನಬಸಪ್ಪ, ಹೆಚ್.ಡಿ. ಕೋಟೆಯ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರಾದ ಶ್ರೀ ರಂಗಸ್ವಾಮಿ, ಮಂಡ್ಯ ಜಿಲ್ಲೆಯ ವಲಯ ಕೃಷಿ ಸಂಶೋಧನಾ ಕೇಂದ್ರ ವಿ.ಸಿ. ಫಾರಂನ ತಳಿ ಸಂಶೋಧಕರಾದ ಡಾ. ಸಿ.ಎ. ದೀಪಕ್, ಕೆವಿಕೆಯ ಪ್ರಭಾರ ಮುಖ್ಶಸ್ಥರಾದ ಶ್ರೀಮತಿ ದಿವ್ಯಾರವರು ಉಪಸ್ಥಿತರಿದ್ದರು. 52 ರೈತರ ಹಾಗೂ ರೈತ ಮಹಿಳೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು


ವಿಶ್ವ ಮಣ್ಣು ದಿನಾಚರಣೆ

ಸುತ್ತೂರಿನ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರವು ತಂತ್ರಜ್ಞಾನ ಸಪ್ತಾಹ ಆಚರಣೆಯ ನಾಲ್ಕನೆಯ ದಿನದಂದು ವಿಶ್ವ ಮಣ್ಣು ದಿನಾಚರಣೆಯನ್ನು ಹೆಚ್.ಡಿ. ಕೋಟೆ ತಾಲ್ಲೂಕಿನ ಮಾಗುಡಿಲು ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕೆವಿಕೆಯ ಮಣ್ಣು ವಿಜ್ಞಾನ ವಿಭಾಗದ ಕಾಯಕ್ರಮ ಸಹಾಯಕರಾದ ಶ್ರೀ ಜೆ.ಜಿ. ರಾಜಣ್ಣ, ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಮುಖ್ಯಸ್ಥರಾದ ಡಾ. ಜಿ.ಹೆಚ್ ಯೋಗೇಶ್, ಕೃಷಿ ತಂತ್ರಜ್ಞಾನ ಸಂಸ್ಥೆಯ ನಿವೃತ್ತ ಸಹಾಯಕ ಕೃಷಿ ನಿರ್ದೇಶಕರಾದ ಕೆ.ಆರ್. ರವೀಂದ್ರ, ಕೆವಿಕೆಯ ಬೇಸಾಯಶಾಸ್ತ್ರದ ವಿಜ್ಞಾನಿ ಶಾಮರಾಜ್ ಉಪಸ್ಥಿತರಿದ್ದರು. ಮಣ್ಣಿನ ಮಹತ್ವ ಹಾಗೂ ನಿರ್ವಹಣೆ ಕುರಿತು ಮಾಹಿತಿ ನೀಡಲಾಯಿತು. ಪ್ರತಿಯೊಬ್ಬ ರೈತರು 3 ವರ್ಷಕ್ಕೊಮ್ಮೆ ತಪ್ಪದೆ ಮಣ್ಣು ಪರೀಕ್ಷೆ ಮಾಡಿಸಿಕೊಳ್ಳುವುದು ಸೂಕ್ತ ಎಂದು ರೈತರಿಗೆ ಮನವರಿಕೆ ಮಾಡಿದರು. ಇದೇ ಸಮಯದಲ್ಲಿ ಮಣ್ಣು ಆರೋಗ್ಯ ಪತ್ರವನ್ನು 80 ರೈತರಿಗೆ ನೀಡಲಾಯಿತು.


ಅಜೋಲ್ಲಾ ಕ್ಷೇತ್ರೋತ್ಸವ

ಸುತ್ತೂರಿನ ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದಿಂದ ಹೆಚ್.ಡಿ. ಕೋಟೆ ತಾಲ್ಲೂಕಿನ ಮಾಗುಡಿಲು ಗ್ರಾಮದ ರೈತ/ರೈತ ಮಹಿಳೆಯರಿಗೆ ಬರಗಾಲದಲ್ಲಿ ಹಸಿರು ಮೇವು ಕೊರತೆ ನೀಗಿಸುವ ರಸಮೇವು ಉತ್ಪಾದನೆ ಬಗ್ಗೆ ತರಬೇತಿ ನೀಡಿ ಜೊತೆಗೆ ಅಜೋಲ್ಲಾ ಪಶು ಆಹಾರದ ಕುರಿತು ಕ್ಷೇತ್ರೋತ್ಸವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರ ಪಶು ವಿಜ್ಞಾನಿ ಡಾ. ರಕ್ಷಿತ್ ರಾಜ್ ಯು. ಎಂ. ರವರು ರಸಮೇವಿನ ಪ್ರಾಮುಖ್ಯತೆ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ೨೪ಗ್ರಾಮಸ್ಥರು ಭಾಗವಹಿಸಿದ್ದರು


ಅರಿಶಿಣ ಬೆಳೆ ಕ್ಷೇತ್ರೋತ್ಸವ

ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ನಂಜನಗೂಡು ತಾಲೂಕಿನ ಕುಪ್ಪರವಳ್ಳಿ ಗ್ರಾಮದಲ್ಲಿ ಸೋಮವಾರ ಅರಿಶಿಣ ಬೆಳೆಯಲ್ಲಿ ಕ್ಷೇತ್ರೋತ್ಸವವನ್ನು ತಂತ್ರಜ್ಞಾನ ಸಪ್ತಾಹದ ಐದನೇ ದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಪ್ರಭಾರ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಶ್ರೀಮತಿ ದಿವ್ಯಾ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಸುಮಾರು 40 ರೈತರು ಮತ್ತು ರೈತ ಮಹಿಳೆಯರು ಭಾಗವಹಿಸಿದ್ದರು.


ನೈಸರ್ಗಿಕ ಕೃಷಿ ಸಮ್ಮೇಳನ

ದಿನಾಂಕ 16 ಡಿಸೆಂಬರ್ 2021 ರಂದು ಸುತ್ತೂರಿನ ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ನೈಸರ್ಗಿಕ ಕೃಷಿ ಸಮ್ಮೇಳನ ಕುರಿತಾದ ಆನ್ ಲೈನ್ ಕಾರ್ಯಕ್ರಮದ ವೀಕ್ಷಣೆ ಹಾಗೂ ದೇಶಿ ತರಕಾರಿ ಬೀಜೋತ್ಪಾದನೆ ಕುರಿತಾದ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು, ಕೇಂದ್ರದ ಕೃಷಿ ಸಚಿವರಾದ ಶ್ರೀ ನರೇಂದ್ರ ಸಿಂಗ್ ತೋಮರ್, ಗುಜರಾತ್‌ನ ರಾಜ್ಯಪಾಲರಾದ ಶ್ರೀ ಆಚಾರ್ಯರವರು ಹಾಗೂ ಗೃಹ ಸಚಿವರಾದ ಶ್ರೀ ಅಮಿತ್ ಶಾ ರವರು ನೈಸರ್ಗಿಕ ಕೃಷಿ ಬಗ್ಗೆ ಮಾತನಾಡಿದರು. ದೇಶಿ ತರಕಾರಿ ಬೀಜೋತ್ಪಾದನೆ ತರಬೇತಿಯಲ್ಲಿ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಹಿಟ್ನೆ ಹೆಬ್ಬಾಗಿಲು ಗ್ರಾಮದ ಶ್ರೀ ಕಾಳಪ್ಪನವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ತಾವು ಮಾಡುತ್ತಿರುವ ದೇಶಿ ತರಕಾರಿ ಬೀಜೋತ್ಪಾದನೆ ಹಾಗೂ ಬೆಳೆಗಳಿಗೆ ತಗಲುವ ರೋಗ ಹಾಗೂ ಕೀಟಗಳ ನಿರ್ವಹಣೆಗೆ ವಿವಿಧ ಸೊಪ್ಪುಗಳನ್ನು ಬಳಸಿ ತಯಾರಿಸುವ ಕಷಾಯಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಪಂಚಾಯಿತಿ ಸದಸ್ಯರಾದ ಶ್ರೀ ಸದಾನಂದರವರು, ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ಪ್ರಭಾರ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಶ್ರೀಮತಿ ದಿವ್ಯಾ ಹೆಚ್.ವಿ. ಹಾಗೂ ಸಿಬ್ಬಂದಿಗಳು ಕೃಷಿ ಮಹಾವಿದ್ಯಾಲಯ, ವಿ.ಸಿ. ಫಾರಂ, ಮಂಡ್ಯ ವಿದ್ಯಾರ್ಥಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಸ್ವ ಸಹಾಯ ಸಂಘದ ಮಹಿಳೆಯರು, ಸಿಬ್ಬಂದಿಗಳು, ಬಿಳಿಗೆರೆ ರೈತ ಸಂಪರ್ಕ ಕೇಂದ್ರದ ಸಿಬ್ಬಂದಿಗಳು, ಟಿವಿಎಸ್ ಸಿಬ್ಬಂದಿ, ಸುತ್ತೂರು, ಬಿಳಿಗರೆ ಹಾಗೂ ಇತರ ಗ್ರಾಮಗಳ ರೈತ/ರೈತ ಮಹಿಳೆಯರು ಮತ್ತು ಕೆವಿಕೆಯ ಸಿಬ್ಬಂದಿಗಳು ಸೇರಿ 87 ಜನರು ಭಾಗವಹಿಸಿದ್ದರು.


ಭತ್ತ ಬೆಳೆ ಕ್ಷೇತ್ರೋತ್ಸವ

ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ದಿನಾಂಕ 18.12.2021 ರಂದು ಟಿ. ನರಸೀಪುರ ತಾಲ್ಲೂಕಿನ ವಾಟಾಳು ಗ್ರಾಮದಲ್ಲಿ ಭತ್ತ (ಕೆಎಂಪಿ 225) ಬೆಳೆಯ ಕ್ಷೇತ್ರೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿದ ವಾಟಾಳು ಗ್ರಾಮದ ಪೂಜ್ಯಶ್ರೀಗಳವರಾದ ಸೂರ್ಯಸಿಂಹಾಸನ ಮಠದ ಕಿರಿಯ ಸ್ವಾಮಿಗಳಾದ ಶಿವಕುಮಾರಸ್ವಾಮಿರವರು ಮಾತನಾಡಿ ಕೆವಿಕೆ ಕಾರ್ಯಕ್ರಮ ಹಾಗೂ ಕೃಷಿ ಕುರಿತ ಇನ್ನಿತರ ಕಾರ್ಯಕ್ರಮಗಳಲ್ಲಿ ರೈತರು ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸೂಚಿಸಿದರು. ಕೆವಿಕೆಯ ಪ್ರಭಾರ ಮುಖ್ಶಸ್ಥರಾದ ಶ್ರೀಮತಿ ಹೆಚ್.ವಿ. ದಿವ್ಯಾ, ಮಂಡ್ಯ ಜಿಲ್ಲೆಯ ವಲಯ ಕೃಷಿ ಸಂಶೋಧನಾ ಕೇಂದ್ರ ವಿ.ಸಿ. ಫಾರಂನ ತಳಿ ಸಂಶೋಧಕರಾದ ಡಾ. ಸಿ.ಎ. ದೀಪಕ್, ಕೆವಿಕೆಯ ಬೇಸಾಯ ಶಾಸ್ತ್ರದ ವಿಜ್ಞಾನಿಯಾದ ಶ್ರೀ ಶಾಮರಾಜ್ ಹಾಗೂ ಸುಮಾರು 40 ರೈತರು ಭಾಗಹಿಸಿದ್ದರು.


ಸಿರಿಧಾನ್ಯ ಕಾರ್ಯಾಗಾರ/ರಾಷ್ಟ್ರೀಯ ರೈತ ದಿನಾಚರಣೆ

ಕೃಷಿ ಇಲಾಖೆ, ಮೈಸೂರು, ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರ, ಸುತ್ತೂರು, ಜಿಲ್ಲಾ ಕೃಷಿಕ ಸಮಾಜ, ಕೃಷಿ ತಂತ್ರಜ್ಞರ ಸಂಸ್ಥೆ, ಮೈಸೂರು ಹಾಗೂ ದೀನ್‌ದಯಾಳ್ ಉಪಾಧ್ಯಾಯ್ ಕೌಶಲ್ ಕೇಂದ್ರ, ಜೆಎಸ್‌ಎಸ್ ಕಾಲೇಜು, ಊಟಿ ರಸ್ತೆ, ಮೈಸೂರು ಇವರ ಸಹಯೋಗದೊಂದಿಗೆ ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನ-೨೦೨೧ ಯೋಜನೆಯಡಿ ಜಿಲ್ಲಾ ಮಟ್ಟದ ಸಿರಿಧಾನ್ಯಗಳ ಕಾರ್ಯಾಗಾರ ಮತ್ತು ವಸ್ತು ಪ್ರದರ್ಶನ ಹಾಗೂ ರಾಷ್ಟ್ರೀಯ ರೈತ ದಿನಾಚರಣೆಯನ್ನು ಮೈಸೂರಿನ ಊಟಿ ರಸ್ತೆಯ ಜೆಎಸ್‌ಎಸ್ ಕಾಲೇಜಿನ ಸಭಾಂಗಣದಲ್ಲಿ ಆಚರಿಸಲಾಯಿತು. ಸಮಾರಂಭ ಉದ್ಘಾಟಿಸಿ ಮಾತನಾಡಿದ ಮೈಸೂರಿನ ಜಿಲ್ಲಾಧಿಕಾರಿಯಾದ ಡಾ. ಬಗಾದಿ ಗೌತಮ್ ರವರು ಮಾತನಾಡಿ ಸಿರಿಧಾನ್ಯಗಳ ಅರಿವು ಎಲ್ಲರಿಗೂ ಇದೆ ಆದರೆ ಸೂಕ್ತವಾದ ಮಾರುಕಟ್ಟೆ ಸಿಗುತ್ತಿಲ್ಲ, ಆದಕಾರಣ ಸಿರಿಧಾನ್ಯಗಳಿಗೆ ಉತ್ತಮ ಮಾರುಕಟ್ಟೆ ಸಿಗುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಶ್ರೀ ಎ.ಎಂ. ಯೋಗೀಶ್ ರವರು, ಬೆಂಗಳೂರಿನ ಐಸಿಎಆರ್ ಅಟಾರಿಯ ಪ್ರಧಾನ ವಿಜ್ಞಾನಿಯಾದ ಡಾ. ಬಿ. ಟಿ. ರಾಯಡು ಹಾಗೂ ಮುಖ್ಯ ತಾಂತ್ರಿಕ ಅಧಿಕಾರಿಯಾದ ಡಾ. ಮಲ್ಲಿಕಾರ್ಜುನ್ ಬಿ. ಹಂಜಿ, ಕೃಷಿಕ ಸಮಾಜದ ಅಧ್ಯಕ್ಷರಾದ ಶ್ರೀ ಕಲ್ಮಳ್ಳಿ ಶಿವಕುಮಾರ್, ಮೈಸೂರಿನ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಕರಾದ ಡಾ. ಎಂ. ಮಹಾಂತೇಶಪ್ಪ, ಜೆಎಸ್‌ಎಸ್ ಮಹಾವಿದ್ಯಾಪೀಠದ ತೋಟಗಾರಿಕೆ ನಿರ್ದೇಶಕರಾದ ಶ್ರೀ ಎನ್. ಎಂ. ಶಿವಶಂಕರಪ್ಪ, ಮೈಸೂರಿನ ಊಟಿ ರಸ್ತೆಯ ಜೆಎಸ್‌ಎಸ್ ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಪ್ರೊ. ಬಿ.ವಿ. ಸಾಂಬಶಿವಯ್ಯನವರು ಹಾಗೂ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರಾದ ಶ್ರೀ ಕೆ. ರುದ್ರೇಶ್‌ರವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಡಾ. ಬಿ. ಎಸ್. ಸೌಮ್ಯಲತಾ, ಶ್ರೀ ಮಿಲ್ ನಾಗರಾಜು, ಶ್ರೀ ಹೊನ್ನೂರು ಪ್ರಕಾಶ್ ಹಾಗೂ ಶ್ರೀಮತಿ ಜಮುನಾ ಅರಸ್‌ರವರು ಸಿರಿಧಾನ್ಯ ಬೇಸಾಯ ಕ್ರಮಗಳು, ಮಾರುಕಟ್ಟೆ ಹಾಗೂ ಮೌಲ್ಯವರ್ಧನೆ ಕುರಿತು ತಾಂತ್ರಿಕ ಮಾಹಿತಿಯನ್ನು ನೀಡಿದರು. ರಾಷ್ಟ್ರೀಯ ರೈತ ದಿನಾಚರಣೆಯ ಅಂಗವಾಗಿ 10 ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು. 408 ರೈತರು 50 ಸಿರಿಧಾನ್ಯ ಮಾರಾಟಗಾರರು, ಕೆವಿಕೆ ಮತ್ತು ಕೃಷಿ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.


ಬಾಳೆ ಮತ್ತು ತರಕಾರಿ ಬೆಳೆಗಳಲ್ಲಿ ಪೋಷಕಾಂಶಗಳ ನಿರ್ವಹಣೆ ಬಗ್ಗೆ ತರಬೇತಿ

ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ನಂಜನಗೂಡು ತಾಲ್ಲೂಕಿನ ಹಂಡುವಿನಹಳ್ಳಿ ಗ್ರಾಮದಲ್ಲಿ ಬಾಳೆ ಮತ್ತು ತರಕಾರಿ ಬೆಳೆಗಳಲ್ಲಿ ಪೋಷಕಾಂಶಗಳ ನಿರ್ವಹಣೆ ಬಗ್ಗೆ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕಾ ವಿಜ್ಞಾನಿಯಾದ ಡಾ. ಜಿ.ಎಂ. ವಿನಯ್ ರವರು ಪೋಷಕಾಂಶಗಳ ಸಮಗ್ರ ನಿರ್ವಹಣೆ ಬಗ್ಗೆ ವಿವರವಾಗಿ ರೈತರಿಗೆ ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ಟಿವಿಎಸ್ ಕಂಪೆನಿ ಹಾಗೂ ಮೈಕ್ರೋನ್ಯೂಟ್ರಿಯಂಟ್ಸ್ ಸಂಸ್ಥೆಯ ಸಿಬ್ಬಂದಿ ವರ್ಗದವರು ಮತ್ತು ಹಂಡುವಿನಹಳ್ಳಿ ಗ್ರಾಮದ ಸುಮಾರು 45 ರೈತರು ಭಾಗವಹಿಸಿದ್ದರು.


ನವಣೆ ಡಿಎಚ್‌ಎಫ್‌ಟಿ 109-3 ತಳಿಯ ಕ್ಷೇತ್ರೋತ್ಸವ

ದಿನಾಂಕ 28 ಡಿಸೆಂಬರ್ 2021 ರಂದು ಸುತ್ತೂರಿನ ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದಿಂದ ನವಣೆ ಡಿಎಚ್‌ಎಫ್‌ಟಿ 109-3 ತಳಿಯ ಕ್ಷೇತ್ರೋತ್ಸವವನ್ನು ಸುತ್ತೂರಿನ ಶ್ರೀ ನಂಜುಂಡನಾಯಕ ರವರ ಜಮೀನಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಕೆವಿಕೆಯ ಗೃಹ ವಿಜ್ಞಾನಿಯಾದ ಶ್ರೀಮತಿ ನೇತ್ರಾವತಿ ಎತ್ತಿನಮನಿ, ಪ್ರಭಾರ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಶ್ರೀಮತಿ ಹೆಚ್.ವಿ. ದಿವ್ಯಾರವರು ಹಾಗೂ ಬೇಸಾಯ ಶಾಸ್ತ್ರ ವಿಜ್ಞಾನಿಯಾದ ಶ್ರೀ ಶಾಮರಾಜ್ ರವರು ನವಣೆ ಬೆಳೆಯ ಬೇಸಾಯ ಕ್ರಮಗಳು, ನವಣೆಯಲ್ಲಿರುವ ಪೋಷಕಾಂಶಗಳು ಹಾಗೂ ಆರೋಗ್ಯಕರ ಲಾಭಗಳ ಬಗ್ಗೆ ತಿಳಿಸಿದರು. ನವಣೆ ಬೆಳೆದ ಸುತ್ತೂರು ಗ್ರಾಮದ ರೈತರಾದ ಶ್ರೀ ನಂಜುAಡನಾಯಕರವರು ನವಣೆ ಬೆಳೆ ಬಗೆಗ ತಮ್ಮ ಅನುಭವ ಹಂಚಿಕೊAಡರು. ಬೊಕ್ಕಳ್ಳಿ ರೈತರಾದ ಶ್ರೀ ನಂಜುAಡಸ್ವಾಮಿ, ಬಿಳಗೆರೆ ಗ್ರಾಮದ ರೈತರಾದ ಶ್ರೀ ಗುರುಲಿಂಗೇಗೌಡ್ರು ಸೇರಿ ಸುತ್ತೂರು ಗ್ರಾಮದ 32 ರೈತರು ಭಾಗವಹಿಸಿದ್ದರು.


ಕೆವಿಕೆಗೆ ವಿದ್ಯಾರ್ಥಿಗಳ ಭೇಟಿ

ವಿ.ಸಿ. ಫಾರಂ ಮಂಡ್ಯ ಕೃಷಿ ಮಹಾವಿದ್ಯಾಲಯದ ಬಿಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಅರಿವು ಕಾರ್ಯಕ್ರಮದಡಿ ದಿನಾಂಕ 16 ರಿಂದ 29 ಡಿಸೆಂಬರ್ 2021ರವರೆಗೆ 3 ಬ್ಯಾಚ್ ಗಳಲ್ಲಿ 69 ವಿದ್ಯಾರ್ಥಿಗಳು ಕೃಷಿ ವಿಜ್ಞಾನ ಕೇಂದ್ರದಕ್ಕೆ ಭೇಟಿ ನೀಡಿ ಪ್ರಾತ್ಯಕ್ಷಿಕಾ ಘಟಕಗಳ ನಿರ್ವಹಣೆ, ಕಾರ್ಯಕ್ರಮ ಸಂಯೋಜನೆ ಹಾಗೂ ಕ್ಷೇತ್ರೋತ್ಸವ ಮುಂತಾದ ವಿವಿಧ ಕಾರ್ಯಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು.


ವೈಜ್ಞಾನಿಕ ಹೈನುಗಾರಿಕೆ ತರಬೇತಿ

ಸುತ್ತೂರಿನ ಐಸಿಎಆರ್‌ ಜೆಎಸ್‌ಎಸ್‌ ಕೃಷಿ ವಿಜ್ಞಾನ ಕೇಂದ್ರದಲ್ಲಿ ದಿನಾಂಕ 28 ರಿಂದ 30 ಡಿಸೆಂಬರ್ 2021ರವರೆಗೆ ಮೂರು ದಿನ ವೈಜ್ಞಾನಿಕ ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ಉತ್ಪಾದನೆ ತರಬೇತಿಯನ್ನು ರೈತರಿಗಾಗಿ ಹಾಗೂ ನಿರುದ್ಯೋಗಿ ಯುವಕರು ಸ್ವಂತ ಉದ್ಯೋಗ ಸೃಷ್ಟಿಸಿಕೊಳ್ಳುವ ನಿಟ್ಟಿನಲ್ಲಿ ಆಯೋಜಿಸಲಾಗಿತ್ತು. ಉದ್ಘಾಟನಾ ಕಾರ್ಯಕ್ರಮದಲ್ಲಿ ಕೆವಿಕೆಯ ಪ್ರಭಾರ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಶ್ರೀಮತಿ ಹೆಚ್.ವಿ. ದಿವ್ಯಾ ಹಾಗೂ ಸಿಬ್ಬಂದಿಯವರು ಭಾಗವಹಿಸಿದ್ದರು. ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಳವಳ್ಳಿ ತಾಲ್ಲೂಕಿನ ಮಿಕ್ಕೆರೆಯ ಶ್ರೀ ಶಿವಣ್ಣರವರು, ಜಯಪುರ ಹೋಬಳಿಯ ಗೋಪಾಲಪುರ ಗ್ರಾಮದ ಹೈನುಗಾರಿಕೆ ಪ್ರಗತಿಪರ ರೈತರಾದ ಶ್ರೀದಿಲೀಪ್‌ ರವರು, ಸುತ್ತೂರು ಪಶು ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿ ಡಾ. ರಾಘವೇಂದ್ರ ಟಿ.ಪಿ., ನಗರ್ಲೆ ಪಶು ಆಸ್ಪತ್ರೆಯ ಹಿರಿಯ ಪಶು ವೈದ್ಯಾಧಿಕಾರಿ ಡಾ. ವಿಜೇತ್, ಭಾಗವಹಿಸಿದ್ದರು. ಸದರಿ ತರಬೇತಿಯಲ್ಲಿ 40 ರೈತರು ಭಾಗವಹಿಸಿದ್ದರು.


ಸ್ವಚ್ಛತಾ ಅಭಿಯಾನ

ದಿನಾಂಕ 16 ರಿಂದ 31 ಡಿಸೆಂಬರ್ 2021 ರವರೆಗೆ ಸ್ವಚ್ಛತಾ ಅಭಿಯಾನ (ಸ್ವಚ್ಛತಾ ಪಕ್ವಾಡ) ದಡಿ ಸುತ್ತೂರಿನ ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ಶಾಸ್ತ್ರ ವಿಜ್ಞಾನಿಯಾದ ಶ್ರೀ ಶಾಮರಾಜ್ ಹಾಗೂ ಸಿಬ್ಬಂದಿಗಳು ಮತ್ತು ವಿ ಸಿ ಫಾರಂ ಮಂಡ್ಯದ ವಿದ್ಯಾರ್ಥಿಗಳು ಕೆವಿಕೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಪ್ರತಿದಿನ ಸ್ವಚ್ಛತೆ ಬಗ್ಗೆ ಜಾಗೃತಿ, ನೀರು ಹಾಗೂ ಪರಿಸರದ ನೈರ್ಮಲ್ಯ, ಕಸದಿಂದ ರಸ, ಕೈತೋಟ, ಮಳೆಕೊಯ್ಲು, ಪ್ಲಾಸ್ಟಿಕ್ ಹಾಗೂ ಇತರ ವಸ್ತುಗಳ ಪುನರ್ಬಳಕೆ ಕುರಿತು 150 ರೈತ/ ರೈತ ಮಹಿಳೆಯರಿಗೆ ಮಾಹಿತಿ ನೀಡಿದರು.


ಹೆಬ್ಬಾಳ ಅವರೆ ಹೆಚ್ಎ-4 ತಳಿ ಬೆಳೆ ಕ್ಷೇತ್ರೋತ್ಸವ

ಸುತ್ತೂರಿನ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲ್ಲೂಕಿನ ಅರಕೆರೆ ಗ್ರಾಮದಲ್ಲಿ ದಿನಾಂಕ 10 ಜನವರಿ 2022 ರಂದು ಹೆಬ್ಬಾಳ ಅವರೆ ಹೆಚ್ಎ-4 ತಳಿ ಬೆಳೆ ಕ್ಷೇತ್ರೋತ್ಸವವನ್ನು ರೈತರಾದ ಶ್ರೀ ಕುಮಾರ್ ರವರ ಜಮೀನಿನಲ್ಲಿಆಯೋಜಿಸಲಾಗಿತ್ತು.ಕ್ಷೇತ್ರೋತ್ಸವದಲ್ಲಿ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ಪ್ರಭಾರ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಶ್ರೀಮತಿ ದಿವ್ಯಾ ಹೆಚ್.ವಿ.ಯವರುಹೆಬ್ಬಾಳ ಅವರೆ ಹೆಚ್ಎ-4 ತಳಿ ವಿಶೇಷತೆ, ಬೀಜೋಪಚಾರದ ಮಹತ್ವ ಹಾಗು ಬೀಜೋತ್ಪಾದನೆಯಲ್ಲಿ ವಹಿಸಬಹುದಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿಸುತ್ತಾಬೀಜೋತ್ಪಾನೆಯಿಂದ ಹೆಚ್ಚಿನ ಆರ್ಥಿಕ ಲಾಭವಾಗುವುದು ಎಂದು ರೈತರು ಬೀಜೋತ್ಪಾದನೆಯಲ್ಲಿ ತೊಡಗಲು ಪ್ರೇರೆಪಿಸಿದರು.


ದೇಸಿ ಹಸುವಿನ ಉತ್ಪನ್ನಗಳ ತಯಾರಿಕೆ ತರಬೇತಿ

ದಿನಾಂಕ 11.01.2022 ರಂದು ಸುತ್ತೂರಿನ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೆಂದ್ರದಲ್ಲಿ ದೇಸಿ ಹಸುವಿನ ಸಗಣಿ ಹಾಗೂ ಗಂಜಲದ ಉತ್ಪನ್ನಗಳ ಬಗ್ಗೆ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು. ಈ ತರಬೇತಿಯಲ್ಲಿ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ಗೃಹ ವಿಜ್ಞಾನಿಯಾದ ಶ್ರೀಮತಿ ನೇತ್ರಾವತಿ ಎತ್ತಿನಮನಿಯವರು ದೇಸಿ ಹಸುವಿನ ಸಗಣಿಯಿಂದ ತಯಾರಿಸಬಹುದಾದ ಉತ್ಪನ್ನಗಳು ಹಾಗೂ ಗಂಜಲದ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡಿದರು. ದೇಸಿ ಹಸುವಿನ ಸಗಣಿಯಿಂದ ವಿಭೂತಿ ತಯಾರಿಕೆ ಹಾಗೂ ಗಂಜಲದಿಂದ ಫಿನೈಲ್ ಸಿದ್ಧಪಡಿಸುವ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಡಲಾಯಿತು. ಈ ತರಬೇತಿಯಲ್ಲಿ ನೇರಳೆ ಹಾಗೂ ಬದನವಾಳು ಗ್ರಾಮದ ಸ್ವ ಸಹಾಯ ಸಂಘದ 40 ಮಹಿಳೆಯರು ಭಾಗವಹಿಸಿದ್ದರು.


ವೈಜ್ಞಾನಿಕ ಕುರಿ ಹಾಗೂ ಮೇಕೆ ಸಾಕಾಣಿಕೆ ತರಬೇತಿ

ಸುತ್ತೂರಿನ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ದಿನಾಂಕ 18.01.2022 ರಿಂದ 20.01.2022 ರವರೆಗೆ ವೈಜ್ಞಾನಿಕ ಕುರಿ ಹಾಗೂ ಮೇಕೆ ಸಾಕಾಣಿಕೆ ತರಬೇತಿಯನ್ನು ಹಮ್ಮಿಕೊಳ್ಳಲಾಗಿದ್ದು, ಈ 3 ದಿನಗಳ ತರಬೇತಿಯ ಉದ್ಘಾಟನಾ ಕಾರ್ಯಕ್ರಮವನ್ನು ದಿನಾಂಕ 18.01.2022ರಂದು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮೈಸೂರು ಹಾಗೂ ಚಾಮರಾಜನಗರ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಅಧ್ಯಕ್ಷರಾದ ಶ್ರೀ ಪಿ. ಸೋಮಶೇಖರ್ ರವರು ಮಾತನಾಡಿ. ಕುರಿ ಸಾಕಾಣಿಕೆ ಲಾಭದಾಯಕ ಚಟುವಟಿಕೆಯಾಗಿದ್ದು, ಈ ತರಬೇತಿಯ ಪ್ರಯೋಜನ ಪಡೆದುಕೊಳ್ಳಬೇಕೆಂದು ತಿಳಿಸಿದರು. ಈ ತರಬೇತಿಯಲ್ಲಿ 40 ಜನರು ಭಾಗವಹಿಸಿದ್ದರು.


ಕನ್ನೇರಿ ಮಠದ ಕೆವಿಕೆಯ ವಿಜ್ಞಾನಿಗಳು ಭೇಟಿ

ದಿನಾಂಕ 29.01.2022 ರಂದು ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕನ್ನೇರಿ ಮಠದ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಹಾಗೂ ಸಿಬ್ಬಂದಿಗಳು ಸುತ್ತೂರಿನ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ಕೆವಿಕೆಯ ಪ್ರಾತ್ಯಕ್ಷಿಕಾ ಘಟಕಗಳಿಗೆ ಭೇಟಿ ನೀಡಿ, ಕೆವಿಕೆ ಚಟುವಟಿಕೆಗಳ ಬಗ್ಗೆ ಚರ್ಚಿಸಿದರು.


ಸುರಕ್ಷಿತ ಕೀಟನಾಶಕಗಳ ಬಳಕೆ – ಜಾಗೃತಿ

ಸುತ್ತೂರಿನ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ದಿನಾಂಕ 11 ಜನವರಿ 2022 ರಂದು ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಸುತ್ತೂರಿನಲ್ಲಿ ಸುರಕ್ಷಿತ ಕೀಟನಾಶಕಗಳ ಬಳಕೆ ಕುರಿತು ಪ್ರಾತ್ಯಕ್ಷಿಕೆ ಮೂಲಕ ಜಾಗೃತಿ ಮೂಡಿಸಲಾಯಿತು. ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ಪ್ರಭಾರ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಶ್ರೀಮತಿ ದಿವ್ಯಾ ಹೆಚ್.ವಿ.ಯವರು ರೈತರನ್ನುದ್ದೇಶಿಸಿ ಅವೈಜ್ಞಾನಿಕ ಹಾಗು ಅಸುರಕ್ಷಿತ ರಾಸಾಯನಿಕ ಸಿಂಪಡನೆಯಿಂದ ಹಲವು ರೋಗಗಳಾದ ಉಸಿರಾಟದ ಸಮಸ್ಯೆ, ಅಸ್ತಮಾ, ತಲೆತಿರುಗುವಿಕೆ, ಕ್ಯಾನ್ಸರ್, ಅಲರ್ಜಿ, ಕಣ್ಣಿನ ಸಮಸ್ಯೆಗಳು ಇನ್ನಿತರ ಹಲವು ರೋಗಗಳಿಗೆ ನಾಂದಿಯಾಗುತ್ತಿವೆಯೆಂದು ತಿಳಿಸಿ,ರೈತರು ರಾಸಾಯನಿಕ ಔಷಧಿಗಳನ್ನು ಸಿಂಪಡಿಸುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಕೆವಿಕೆಯ ಸಿಬ್ಬಂದಿಗಳು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘದ 40 ಮಹಿಳೆಯರು ಹಾಗು ಕೃಷಿ ಪರಿಕರಗಳ ಮಾರಾಟಗಾರರ 37 ಡಿಪ್ಲೊಮೋ ತರಬೇತುದಾರರು ಭಾಗವಹಿಸಿದ್ದರು.


ನೈಸರ್ಗಿಕ ಕೃಷಿ ಕುರಿತಾದ ತರಬೇತಿ

ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ದಿನಾಂಕ 12 ಜನವರಿ 2022 ರಂದು ಗ್ರಾಮೀಣ ಯುವಕರಿಗೆ ನೈಸರ್ಗಿಕ ಕೃಷಿ ಮತ್ತು ಸ್ಥಳೀಯವಾಗಿ ದೊರೆಯುವ ನೈಸರ್ಗಿಕ ಸಂಪನ್ಮೂಲಗಳನ್ನು ಉಪಯೋಗಿಸಿಕೊಂಡು ಬೀಜಮೃತ, ಜೀವಾಮೃತ ಮತ್ತು ಘನಜೀವಾಮೃತ ತಯಾರಿಕೆ ಮತ್ತು ಉಪಯೋಗಗಳು ಹಾಗೂ ಕೀಟ ಮತ್ತು ರೋಗಗಳನ್ನು ನೈಸರ್ಗಿಕವಾಗಿ ನಿರ್ವಹಣೆ ಕುರಿತು ತರಬೇತಿ ನೀಡಲಾಯಿತು ಹಾಗೂ ನೀಮಸ್ತ್ರ, ಬ್ರಹ್ಮಾಸ್ತ್ರ, ಅಗ್ನಿಹಸ್ತ್ರ ಮತ್ತು ದಶಪರ್ನಿಕಾಶಯ ತಯಾರಿಕೆ ಬಗ್ಗೆ ತರಬೇತಿ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಸುಮಾರು 32 ಜನ ಭಾಗವಹಿಸಿ ತರಬೇತಿಯ ಪ್ರಯೋಜನ ಪಡೆದುಕೊಂಡರು.


ಗ್ರಾಮೀಣ ಸಹಭಾಗಿತ್ವದಲ್ಲಿ ಕೃಷಿ ಅಧ್ಯಯನ ಕಾರ್ಯಕ್ರಮ

ದಿನಾಂಕ 7, 18, 20 ಹಾಗೂ 27 ಜನವರಿ 2022 ರಂದು ಕ್ರಮವಾಗಿ ನಂಜನಗೂಡು ತಾಲ್ಲೂಕಿನ ಹರತಲೆ, ಟಿ. ನರಸೀಪುರ ತಾಲ್ಲೂಕಿನ ಡಣಾಯಕನಪುರ, ಮೈಸೂರು ತಾಲ್ಲೂಕಿನ ಚಿಕ್ಕಖಾನ್ಯ ಹಾಗೂ ಹುಣಸೂರು ತಾಲ್ಲೂಕಿನ ಹುಲ್ಯಾಳ ಗ್ರಾಮಗಳಿಗೆ ಸುತ್ತೂರಿನ ಜೆಎಸ್ಎಸ್ ಕೆವಿಕೆಯ ವಿಜ್ಞಾನಿಗಳು ಭೇಟಿ ನೀಡಿ ಆ ಗ್ರಾಮಗಳಲ್ಲಿ ಬೆಳೆಯುವ ಬೆಳೆಗಳು, ಬೆಳೆಗಳಲ್ಲಿ ಕಂಡು ಬರುವ ಕೀಟ ಹಾಗೂ ರೋಗಗಳು, ತಂತ್ರಜ್ಞಾನಗಳ ಬಗ್ಗೆ ಮಾಹಿತಿ ಕೊರತೆ ಹಾಗೂ ಕೃಷಿಗೆ ಸಂಬಂದಿಸಿದ ಇತರೆ ಮೂಲಭೂತ ಮಾಹಿತಿಗಳನ್ನು ಸಂಗ್ರಹಿಸಿ, 2022-23 ನೇ ಸಾಲಿನಲ್ಲಿ ಈ ಸಮಸ್ಯೆಗಳಿಗೆ ಸಂಬಂದಪಟ್ಟ ಕಾರ್ಯಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ರೈತರೊಂದಿಗೆ ಚರ್ಚಿಸಿದರು.


ಅಂತಾರಾಷ್ಟ್ರೀಯ ರಾಗಿ ಸಮ್ಮೇಳನದಲ್ಲಿ ಭಾಗವಹಿಸುವಿಕೆ

ದಿನಾಂಕ 21.01.2022 ರಂದು ಸುತ್ತೂರಿನ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದಿಂದ ಮಾರ್ಗದರ್ಶನ ಪಡೆದು ರಾಗಿ ಬೆಳೆದ ಕೆ. ಆರ್. ನಗರ ತಾಲ್ಲೂಕಿನ 5 ಜನ ರೈತ/ರೈತ ಮಹಿಳೆಯರು ಹಾಗೂ ಕೆವಿಕೆಯ ಗೃಹ ವಿಜ್ಞಾನಿಯಾದ ಶ್ರೀಮತಿ ನೇತ್ರಾವತಿ ಎತ್ತಿನಮನಿಯವರುವಿಸಿಫಾರಂ ಮಂಡ್ಯದಲ್ಲಿ ನಡೆದ ಅಂತಾರಾಷ್ಟ್ರೀಯ ರಾಗಿ ಸಮ್ಮೇಳನದಲ್ಲಿ ಭಾಗವಹಿಸಿದ್ದು, ಈ ಸಮ್ಮೇಳನದಲ್ಲಿ ರೈತಮಹಿಳೆಯಾದ ಶ್ರೀಮತಿ ಇಂದಿರಮ್ಮರವರು ರಾಗಿಯಲ್ಲಿ ವಿವಿಧ ತಳಿಗಳ ಉತ್ಪಾದನೆ, ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಸಂಘಗಳ ಬಗ್ಗೆ ತಮ್ಮ ಅನುಭವಗಳನ್ನು ವಿಜ್ಞಾನಿಗಳೊಂದಿಗೆ ಹಾಗೂ ಇತರೆ ರೈತರೊಂದಿಗೆ ಹಂಚಿಕೊಂಡರು.


ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ

ದಿನಾಂಕ 24 ಡಿಸೆಂಬರ್ 2022 ರಂದು ಸುತ್ತೂರಿನ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ಪ್ರಭಾರ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಶ್ರೀಮತಿ ಹೆಚ್. ವಿ. ದಿವ್ಯಾರವರು ಮಾತನಾಡಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಉದ್ದೇಶ ಹಾಗೂ ಸರ್ಕಾರದಿಂದ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಯೋಜನೆಗಳ ಬಗ್ಗೆ ತಿಳಿಸಿದರು. ಮೈಸೂರು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾ ಅಧಿಕಾರಿಯಾದ ಶ್ರೀಮತಿ ಮಮತಾ ಎ. ರವರು ಮಾತನಾಡಿ ಕಿಶೋರಿಯಲ್ಲಾಗುವ ಬದಲಾವಣೆಗಳು ಹಾಗೂ ಹೆಣ್ಣು ಮಕ್ಕಳ ಹಕ್ಕುಗಳ ಬಗ್ಗೆ ತಿಳಿಸಿದರು. ಮೈಸೂರು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಪ್ತ ಸಮಾಲೋಚಕರಾದ ಶ್ರೀಮತಿ ಮಮತಾ ಎಮ್. ಎಸ್. ರವರು ಮಕ್ಕಳ ರಕ್ಷಣಾ ಘಟಕದ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿಸಿದರು. ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ಗೃಹ ವಿಜ್ಞಾನಿಯಾದ ಶ್ರೀಮತಿ ನೇತ್ರಾವತಿ ಎತ್ತಿನಮನಿಯವರು ರಕ್ತಹೀನತೆಯನ್ನು ತಡೆಗಟ್ಟುವ ವಿಧಾನಗಳ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಸುತ್ತೂರು ಜೆಎಸ್ಎಸ್ ಪ್ರೌಢಶಾಲೆಯ 50 ವಿದ್ಯಾರ್ಥಿನಿಯರು ಹಾಗೂ ಶಿಕ್ಷಕಿಯಾದ ಶ್ರೀಮತಿ ಯಶೋಧಾ ರವರು ಭಾಗವಹಿಸಿದ್ದರು.


ಬಾಳೆ ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ತರಬೇತಿ

ದಿನಾಂಕ 29 ಜನವರಿ 2022 ರಂದು ಸುತ್ತೂರಿನ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬಾಳೆ ಸಂಸ್ಕರಣೆ ಹಾಗೂ ಮೌಲ್ಯವರ್ಧನೆ ಕುರಿತಾದ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಆತ್ಮನಿರ್ಭರ ಯೋಜನೆಯ ಫಲಾನುಭವಿಗಳಾದ ಶ್ರೀ ಹೆಚ್. ಎಂ. ನವೀನ್ ರವರು ಸಂಪನ್ಮೂಲ ವ್ಯಕ್ತಿಯಾಗಿ ಆನ್ ಲೈನ್ ಮೂಲಕ ಭಾಗವಹಿಸಿ ಮಾತನಾಡಿ ಬಾಳೆಕಾಯಿ ಪುಡಿಯಿಂದ ತಯಾರಿಸುವ ಬಗ್ಗೆ ಹಾಗೂ ಬಾಳೆ ಕಾಯಿಹುಡಿಯಿಂದ ತಯಾರಿಸಬಹುದಾದ ಉತ್ಪನ್ನಗಳು ಹಾಗೂ ಮಾರಾಟದ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು. ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ಗೃಹ ವಿಜ್ಞಾನಿಯಾದ ಶ್ರೀಮತಿ ನೇತ್ರಾವತಿ ಬಾಳೆ ಕಾಯಿ ಪುಡಿಯಿಂದ ಬಾದಾಮ್ ಪುರಿ, ಚಕ್ಕುಲಿ, ಪರೋಟ, ಉಂಡೆ ಹಾಗೂ ಶಾವಿಗೆ ಬಾಳೆಕಾಯಿ ಹುಡಿ ಪಾಯಸ ತಯಾರಿಸುವುದನ್ನು ಪ್ರಾತ್ಯಕ್ಷಿಕೆ ಮೂಲಕ ಮಹಿಳೆಯರಿಗೆ ತೋರಿಸಿಕೊಟ್ಟರು. ಈ ತರಬೇತಿಯಲ್ಲಿ ಧಾನ್ ಪೌಂಢೇಷನ್ ನ 30 ಸ್ವ ಸಹಾಯ ಸಂಘದ ಮಹಿಳೆಯರು ಭಾಗವಹಿಸಿದ್ದರು


ಪ್ರಗತಿಪರ ರೈತ ಸಾಧಕರಿಗೆ ಸನ್ಮಾನ

ಸುತ್ತೂರು ಶ್ರೀಕ್ಷೇತ್ರದಲ್ಲಿ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದ ಅಂಗವಾಗಿ ದಿನಾಂಕ ೩೦ ಜನವರಿ ೨೦೨೨ ರಂದು ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ನೆರವೇರಿದ ಧಾರ್ಮಿಕ ಆಚರಣೆಗಳ ಶುಭ ಸಂದರ್ಭದಲ್ಲಿ ಸುತ್ತೂರಿನ ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರ ಹಾಗು ಯಳಂದೂರು ತಾಲ್ಲೂಕು ದುಗ್ಗಹಟ್ಟಿ ಗ್ರಾಮದ ಶ್ರೀಮತಿ ಸುಂದರಮ್ಮ ವೀರಭದ್ರಪ್ಪ ಪ್ರತಿಷ್ಠಾನದ ಸಹಯೋಗದಲ್ಲಿ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಅತ್ಯುತ್ತಮವಾಗಿ ಬೆಳೆ ಬೆಳೆದ ೧೦ ರೈತರಿಗೆ ಪ್ರಶಸ್ತಿ ನೀಡಲಾಯಿತು.


ಹಕ್ಕುಗಳನ್ನು ಕಾಯ್ದಿರಿಸಿದೆ : ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ, ಸುತ್ತೂರು, ಮೈಸೂರು ಜಿಲ್ಲೆ ಭೇಟಿ ಸಂಖ್ಯೆ: