ಏಪ್ರಿಲ್ ಮತ್ತು ಮೇ 2022 ಕಾರ್ಯಕ್ರಮಗಳು


ಹೊಲಿಗೆ ತರಬೇತಿಯ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ

ದಿನಾಂಕ 12 ಏಪ್ರಿಲ್ 202 ರಂದು ಮೈಸೂರಿನ ಜೆಎಸ್ಎಸ್ ಜನಶಿಕ್ಷಣಾ ಸಂಸ್ಥೆ, ಸುತ್ತೂರಿನ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ ಹಾಗೂ ಪುಣ್ಯಭೂಮಿ ಟ್ರಸ್ಟ್ ಸಹಯೋಗದಲ್ಲಿ ಹೊಲಿಗೆ ತರಬೇತಿಯ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸುವ ಕಾರ್ಯಕ್ರಮವನ್ನು ಮೈಸೂರು ತಾಲ್ಲೂಕಿನ ಪಿಲ್ಲಹಳ್ಳಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ತರಬೇತಿಯು 4 ತಿಂಗಳ ಅವಧಿಗೆ ನಡೆದಿದ್ದು, ಪಿಲ್ಲಹಳ್ಳಿ ಗ್ರಾಮದ 20 ಮಹಿಳೆಯರು ಭಾಗವಹಿಸಿದ್ದು, ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಜೆಎಸ್ಎಸ್ ಜನ ಶಿಕ್ಷಣಾ ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ಶಶಿಕಲಾ ಡಿ.ಎಮ್., ಜೆಎಸ್ಎಸ್ ಕೆವಿಕೆಯ ಪ್ರಭಾರ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಶ್ರೀಮತಿ ದಿವ್ಯಾ ಹೆಚ್.ವಿ., ಗೃಹ ವಿಜ್ಞಾನಿ ಶ್ರೀಮತಿ ನೇತ್ರಾವತಿ ಎತ್ತಿನಮನಿ, ಲಯನ್ಸ್ ಕ್ಲಬ್ ನ ಸಿಬ್ಬಂದಿಗಳಾದ ಶ್ರೀ ಅಚ್ಯುತ್ ರಾವ್, ಮಂಜುನಾಥ, ಚಂದ್ರಶೇಖರ್, ಭಾರತೀಯ ಕಿಸಾನ್ ಸಂಘದ ಜಿಲ್ಲಾ ಕಾರ್ಯದರ್ಶಿಗಳಾದ ಶ್ರೀ ಸತ್ಯಮೂರ್ತಿ ಹಾಗೂ ಶ್ರೀ ಮಂಜುನಾಥ, ಪಿಲ್ಲಹಳ್ಳಿ ಗ್ರಾಮದ ಮುಖಂಡರುಗಳಾದ ಶ್ರೀ ರಾಮಚಂದ್ರ, ಶ್ರೀ ನಿಂಗಪ್ಪ, ಶ್ರೀ ನಂಜುಂಡಸ್ವಾಮಿ ಉಪಸ್ಥಿತರಿದ್ದರು.


ರೈತರೊಂದಿಗೊಂದು ದಿನ ಕಾರ್ಯಕ್ರಮದಲ್ಲಿ ಭಾಗವಹಿಸುವಿಕೆ

ದಿನಾಂಕ 22 ಏಪ್ರಿಲ್ 2022 ರಂದು ಮೈಸೂರು ತಾಲ್ಲೂಕಿನ ತಳೂರು ಗ್ರಾಮದ ಶ್ರೀ ಸೋಮಶೇಖರ್ ರವರ ಜಮೀನಿನಲ್ಲಿ ಕೃಷಿ ಇಲಾಖೆಯಿಂದ ಹಮ್ಮಿಕೊಳ್ಳಲಾದ ರೈತರೊಂದಿಗೊಂದು ದಿನ ಕಾರ್ಯಕ್ರಮದಲ್ಲಿ ಸುತ್ತೂರಿನ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಹಾಯಕ (ಮಣ್ಣು ವಿಜ್ಞಾನ) ರಾದ ಶ್ರೀ ರಾಜಣ್ಣ ರವರು ಹಾಗೂ ಕೆವಿಕೆಯ ಇನ್ ಕ್ಯೂಬಿಟಿಯಾದ ವಸುದಾ ಮಸಾಲೆಯ ಶ್ರೀ ಲೋಕರಂಗನ್ ರವರು ಭಾಗವಹಿಸಿ ಕೆವಿಕೆ ಹಾಗೂ ವಸುದಾ ಮಸಾಲೆಯವರ ಉತ್ಪನ್ನಗಳನ್ನು ಮಳಿಗೆಯಲ್ಲಿ ಪ್ರದರ್ಶನ ಮಾಡಿದರು. ಉತ್ಪನ್ನಗಳನ್ನು ಪ್ರದರ್ಶಿಸಿದ್ದ ಮಳಿಗೆಯನ್ನು ಕರ್ನಾಟಕ ರಾಜ್ಯದ ಕೃಷಿ ಸಚಿವರಾದ ಶ್ರೀ ಬಿ.ಸಿ. ಪಾಟೀಲ್ ರವರು ಉದ್ಘಾಟಿಸಿದರು.


ಅಜೋಲ್ಲಾ ತರಬೇತಿ

ದಿನಾಂಕ 22 ಏಪ್ರಿಲ್ 2022 ರಂದು ಹ್ಯಾಂಡ್ ಇನ್ ಹ್ಯಾಂಡ್ ಸಂಸ್ಥೆಯ ವತಿಯಿಂದ ಹೆಡಿಯಾಲ ಗ್ರಾಮದಲ್ಲಿ ಅಜೋಲ್ಲಾ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು. ಈ ತರಬೇತಿಯಲ್ಲಿ ಕೆವಿಕೆಯ ಹಿರಿಯ ವಿಜ್ಞಾನಿಯಾದ ಶ್ರೀ ಮಂಜುನಾಥ ಅಂಗಡಿ ಹಾಗೂ ಪಶು ವಿಜ್ಞಾನಿಯಾದ ಡಾ. ರಕ್ಷಿತ್ ರಾಜ್ ಯು.ಎಮ್. ರವರು ಭಾಗವಹಿಸಿ ಅಜೋಲ್ಲಾ ಬೇಸಾಯದ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ 30 ಕ್ಕೂ ಅಧಿಕ ರೈತರು ಭಾಗವಹಿಸಿದ್ದರು.


ರೈತರ ಪಾಲ್ಗೊಳ್ಳುವಿಕೆ ನಮ್ಮ ಆದ್ಯತೆ ಕಾರ್ಯಕ್ರಮ

ಸ್ವಾತಂತ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಭಾರತ ಸರ್ಕಾರದ ಕೃಷಿ ಸಚಿವಾಲಯ ದೇಶಾದ್ಯಂತ ಆಯೋಜಿಸಿದ ನಮ್ಮ ರೈತ ಪಾಲುದಾರರ ಆದ್ಯತೆ (ಕಿಸಾನ್ ಭಾಗಿದಾರಿ ಪ್ರಾಥಮಿಕಾ ಹಮಾರಿ) ಕಾರ್ಯಕ್ರಮವನ್ನು ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ ಹಾಗೂ ಆತ್ಮಾ ಯೋಜನೆ, ಕೃಷಿ ಇಲಾಖೆ ಮೈಸೂರು ರವರುಗಳ ಸಹಯೋಗದೊಂದಿಗೆ ದಿನಾಂಕ ೨೬ ಏಪ್ರಿಲ್ ೨೦೨೨ ರಂದು ಸುತ್ತೂರಿನಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ನಂಜನಗೂಡು ತಾಲ್ಲೂಕಿನ ಬಿಳಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಮಹದೇವಮ್ಮರವರು ಉದ್ಘಾಟಿಸಿದರು. ಮೈಸೂರು ಜಿಲ್ಲೆಯ ನಬಾರ್ಡ್ ಜಿಲ್ಲಾಭಿವೃದ್ಧಿ ವ್ಯವಸ್ಥಾಪಕರಾದ ಶ್ರೀ ಟಿ.ವಿ. ಸುಬ್ಬಯ್ಯ, ಸುತ್ತೂರು ಜೆಎಸ್ಎಸ್ ಸಂಸ್ಥೆಗಳ ಸಹಾಯಕ ಸಂಯೋಜನಾಧಿಕಾರಿಯಾದ ಶ್ರೀ ವಿ. ವೀರಭದ್ರಯ್ಯ, ಮೈಸೂರು ಜಿಲ್ಲೆಯ ಕೃಷಿ ಇಲಾಖೆಯ ಆತ್ಮಾ ಯೋಜನೆಯ ಉಪ ಯೋಜನಾ ನಿರ್ದೇಶಕರಾದ ಶ್ರೀಮತಿ ಕುಮುದಾ, ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿಯಾದ ಶ್ರೀ ಮಂಜುನಾಥ ಅಂಗಡಿ ಹಾಗೂ ಪ್ರಭಾರ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಶ್ರೀಮತಿ ಹೆಚ್.ವಿ. ದಿವ್ಯಾ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ನೇರ ಪ್ರಸಾರದ (ಆನ್ ಲೈನ್) ಮೂಲಕ ಕೇಂದ್ರ ಸರ್ಕಾರದ ಕೃಷಿ ಸಚಿವರಾದ ಶ್ರೀ ನರೇಂದ್ರಸಿಂಗ್ ತೋಮರ್ ರವರು ಕೇಂದ್ರ ಸರ್ಕಾರವು ರೈತರ ಅಭಿವೃದ್ಧಿಗಾಗಿ ಕೈಗೊಂಡಿರುವ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಪ್ರಗತಿಪರ ರೈತರಾದ ಟಿ.ನರಸೀಪುರ ತಾಲ್ಲೂಕಿನ ಮಾಡ್ರಳ್ಳಿಯ ಭತ್ತದ ತಳಿಗಳ ಸಂರಕ್ಷಕರಾದ ಶ್ರೀ ಶಂಕರ್ ಗುರು, ನಂಜನಗೂಡು ತಾಲ್ಲೂಕಿನ ಹೆಡಿಯಾಲ ಗ್ರಾಮದ ಜೇನು ಕೃಷಿಯ ಪ್ರಗತಿಪರ ರೈತರಾದ ಶ್ರೀ ಜಯಶಂಕರ್ ಹಾಗೂ ಮೈಸೂರು ತಾಲ್ಲೂಕಿನ ಜಯಪುರ ಗ್ರಾಮದ ತೆಂಗು ಬೆಳೆಯ ಪ್ರಗತಿಪರ ರೈತರದಾದ ಶ್ರೀ ರೋಹಿತ್ ರವರುಗಳನ್ನು ಸನ್ಮಾನಿಸಲಾಯಿತು. ಸದರಿ ಕಾರ್ಯಕ್ರಮದಲ್ಲಿ ಸಿರಿಧಾನ್ಯ ತಯಾರಿಸಿದ ಮೌಲ್ಯವರ್ಧಿತ ಆಹಾರ, ಸಾವಯವ ಆಹಾರ ಪದಾರ್ಥಗಳ ವಸ್ತುಪ್ರದರ್ಶನ ಹಾಗೂ ಮಾರಾಟ ಮಳಿಗೆಯನ್ನು ಆಯೋಜಿಸಲಾಗಿತ್ತು. ೩೦೦ಕ್ಕೂ ರೈತ ಹಾಗೂ ರೈತ ಮಹಿಳೆಯರು ಭಾಗವಹಿಸಿದ್ದರು.


5. ತೆಂಗು ಬೆಳೆಯ ವೈಜ್ಞಾನಿಕ ಬೇಸಾಯ ಕ್ರಮಗಳು ಕುರಿತಾದ ಕಾರ್ಯಗಾರ

ದಿನಾಂಕ 26 ಏಪ್ರಿಲ್ 2022 ರಂದು ಸುತ್ತೂರಿನ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕಿಸಾನ್ ಭಾಗಿದಾರಿ ಪ್ರಾಥಮಿಕತಾ ಹಮಾರಿ ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಮಟ್ಟದ ಒಂದು ದಿನದ ತೆಂಗು ಬೆಳೆಯ ವೈಜ್ಞಾನಿಕ ಬೇಸಾಯ ಕ್ರಮಗಳು ಕುರಿತಾದ ಕಾರ್ಯಗಾರವನ್ನು ತೆಂಗು ಅಭಿವೃದ್ಧಿ ಮಂಡಳಿಯವರ ಜಂಟಿ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಸಂಸ್ಥೆಯ ಹಿರಿಯ ವಿಜ್ಞಾನಿಗಳಾದ ಶ್ರೀ ಮಂಜುನಾಥ್ ಅಂಗಡಿಯವರು ನಿವೃತ್ತ ಜಂಟಿ ಕೃಷಿ ನಿರ್ದೇಶಕರು ಶ್ರೀ ವಿಷಕಂಠರವರು, ಕೇಂದ್ರದ ಪ್ರಭಾರ ಹಿರಿಯ ವಿಜ್ಞಾನಿ ಹಾಗು ಮುಖ್ಯಸ್ಥರಾದ ಶ್ರೀಮತಿ ಹೆಚ್. ವಿ. ದಿವ್ಯಾ, ತೆಂಗು ಅಭಿವೃದ್ಧಿ ಮಂಡಳಿಯ ಯೋಜನೆಗಳ ಬಗ್ಗೆ ಕ್ಷೇತ್ರಾಧಿಕಾರಿಯಾದ ಶ್ರೀ ಹರಿದಾಸ್ ತಾಂತ್ರಿಕ ಕಾರ್ಯಕ್ರಮದಲ್ಲಿ ತೋಟಗಾರಿಕೆ ವಿಜ್ಞಾನಿ ಡಾ, ವಿನಯ್ ಜಿ. ಎಂ. ತೆಂಗಿನ ತಳಿಗಳ ಆಯ್ಕೆ ಮತ್ತು ಅಂತರ ಬೆಳೆಗಳ ಬಗ್ಗೆ ವಿವರಿಸಿದರೆ, ಶ್ರೀ ಮಂಜುನಾಥ್ ಅಂಗಡಿಯವರು ತೆಂಗಿನ ತೋಟದಲ್ಲಿ ಹನಿ ನೀರಾವರಿ ಮತ್ತು ರಸಾವರಿಗಳ ಬಗ್ಗೆ ತಿಳಿಸಿದರು. ಮಣ್ಣು ವಿಜ್ಞಾನಿ ಶ್ರೀ ಜೆ.ಜಿ. ರಾಜಣ್ಣನವರು ಪೋಷಕಾಂಶಗಳ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು ಹಾಗು ಗೃಹ ವಿಜ್ಞಾನಿ ಶ್ರೀಮತಿ ನೇತ್ರಾವತಿ ಎತ್ತಿನಮನಿ ತೆಂಗು ಬೆಳೆಯ ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಬಗ್ಗೆ ತಿಳಿಸಿದರು. ಮೈಸೂರು ತಾಲ್ಲೂಕಿನ ಜಯಪುರ ಗ್ರಾಮದ ತೆಂಗು ಬೆಳೆಯ ಪ್ರಗತಿಪರ ರೈತರಾದ ಶ್ರೀ ರೋಹಿತ್ ರವರು ತೆಂಗು ಬೆಳೆಯ ನಿರ್ವಹಣೆ ಮತ್ತು ನರ್ಸರಿಯ ಕುರಿತು ತಮ್ಮ ಅನುಭವವನ್ನು ಹಂಚಿಕೊಂಡರು ಕಾರ್ಯಕ್ರಮದಲ್ಲಿ ಸುಮಾರು 116ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.


ಕ್ಷೇತ್ರ ಭೇಟಿ

ದ್ವಿದಳ ಬೀಜ ಗ್ರಾಮ ಯೋಜನೆಯಡಿ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರವು ದ್ವಿದಳ ಧಾನ್ಯವಾದ ಉದ್ದು ಎಲ್.ಬಿ.ಜಿ 791 ತಳಿಯನ್ನು 393 ರೈತರಿಗೆ 327 ಹೆಕ್ಟೇರ್ ಪ್ರದೇಶಕ್ಕೆ 2022-23ನೆಯ ಸಾಲಿನಲ್ಲಿ ನೀಡಲಾಗಿದೆ. ಸದರಿ ಉದ್ದು ಬಿತ್ತನೆ ಕ್ಷೇತ್ರಗಳಿಗೆ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು (ಪ್ರಭಾರ) ಹಾಗೂ ತಾಂತ್ರಿಕ ಅಧಿಕಾರಿ (ಬೀಜ ಗ್ರಾಮ ಯೋಜನೆ) ಭೇಟಿ ನೀಡಿದ್ದರು. ಸದರಿ ಭೇಟಿಯಲ್ಲಿ ರೈತರಿಗೆ ಕಳೆ ನಿರ್ವಹಣೆ ಉತ್ತಮ ಉದ್ದು ಆಯ್ಕೆ ಹಾಗೂ ಬೀಜ ಶೇಖರಣೆ ಕುರಿತು ಮಾಹಿತಿ ನೀಡಿದರು.


ಕೆವಿಕೆಗೆ ಭೇಟಿ

ದಿನಾಂಕ 03.05.2022 ರಂದು ತಮಿಳುನಾಡು ಈರೋಡ್ ನ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಕೆವಿಕೆಗೆ ಭೇಟಿ ನೀಡಿದರು. ಸದರಿ ಭೇಟಿಯಲ್ಲಿ ಕೆವಿಕೆಯ ಪ್ರಾತ್ಯಕ್ಷಿಕಾ ಘಟಕಗಳನ್ನು ಭೇಟಿ ಮಾಡಿ ಮಾಹಿತಿ ಪಡೆದರು. ಮೈಸೂರು ಜಿಲ್ಲೆಯ ಕೃಷಿ ಹವಾಮಾನಕ್ಕೆ ಹೊಂದಿಕೊಂಡಂತೆ ಬೆಳೆಯುವ ಬೆಳೆಗಳು ಹಾಗೂ ತರಕಾರಿಗಳ ಕುರಿತು ಮಾಹಿತಿ ಪಡೆದರು.


ಕೃಷಿ ಸಂಜೀವಿನಿ ಕಾರ್ಯಕ್ರಮ

ದಿನಾಂಕ 15 ಮೇ 2022 ರಂದು ಕೃಷಿ ಸಂಜೀವಿನಿ ಕಾರ್ಯಕ್ರಮದಡಿ ಸಿಂಧುವಳ್ಳಿ, ಎಲಚಗೆರೆ ಹಾಗೂ ಕುಡ್ಲೂರು ಗ್ರಾಮಗಳಿಗೆ ಜೆಎಸ್‌ಎಸ್ ಕೆವಿಕೆಯ ತೋಟಗಾರಿಕೆ ವಿಜ್ಞಾನಿಯಾದ ಡಾ. ವಿನಯ್ ಜಿ.ಎಮ್. ರವರು ಈರುಳ್ಳಿ, ಟೊಮ್ಯಾಟೊ, ಬಾಳೆ, ಶುಂಠಿ ಹಾಗೂ ತೆಂಗು ಬೆಳೆದ ರೈತರ ಜಮೀನಿಗೆ ಭೇಟಿ ನೀಡಿ ಈ ಬೆಳೆಗಳಲ್ಲಿ ಕಂಡುಬರುವ ರೋಗ ಹಾಗೂ ಕೀಟಗಳ ನಿಯಂತ್ರಣದ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ತೋಟಗಾರಿಕೆ ಉಪನಿರ್ದೇಶಕರು, ಸಹಾಯಕ ತೋಟಗಾರಿಕೆ ನಿರ್ದೇಶಕರು, ಕೃಷಿ ತಂತ್ರಜ್ಞರ ಸಂಸ್ಥೆಯ ಸದಸ್ಯರು, ಕೃಷಿ ಹಾಗೂ ತೋಟಗಾರಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.


ಕೆವಿಕೆ, ಧಾರವಾಡಕ್ಕೆ ಭೇಟಿ

ದಿನಾಂಕ 27.05.2022 ರಂದು ಕೇಂದ್ರದ ತೋಟಗಾರಿಕೆ ವಿಜ್ಞಾನಿ ಡಾ. ಜಿ.ಎಂ. ವಿನಯ್, ಕಾರ್ಯಕ್ರಮ ಸಹಾಯಕರಾದ ಶ್ರೀ ಜೆ.ಜಿ. ರಾಜಣ್ಣ ಹಾಗೂ ಫಾರಂ ಮ್ಯಾನೇಜರ್ ಶ್ರೀ ಗಂಗಪ್ಪ ಹಿಪ್ಪರಗಿಯವರು ಕೆವಿಕೆ, ಧಾರವಾಡಕ್ಕೆ ಭೇಟಿ ನೀಡಿದರು. ಸದರಿ ಕೇಂದ್ರದಲ್ಲಿ ನೂತನವಾಗಿ ನಿರ್ಮಿಸಿರುವ ಮಣ್ಣು ಪರೀಕ್ಷೆ ಪ್ರಯೋಗಾಲಯ ಹಾಗೂ ಮಾವು ತಳಿಗಳ ಕುರಿತು ಮಾಹಿತಿ ಪಡೆದುಕೊಂಡರು.


ಕೈತೋಟದ ತರಬೇತಿ ಹಾಗೂ ವಿಶ್ವ ಜೇನು ಹುಳು ದಿನಾಚರಣೆ

ಸುತ್ತೂರಿನ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ದಿನಾಂಕ 20 ಮೇ 2022ರಂದು ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಹರತಲೆ ಗ್ರಾಮದಲ್ಲಿ ಪೌಷ್ಟಿಕ ಕೈತೋಟದ ತರಬೇತಿ ಕಾರ್ಯಕ್ರಮ ಹಾಗೂ ವಿಶ್ವ ಜೇನು ಹುಳು ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ಗೃಹ ವಿಜ್ಞಾನಿ ಶ್ರೀಮತಿ ನೇತ್ರಾವತಿ ಎತ್ತಿನಮನಿಯವರು ಕೈತೋಟದಲ್ಲಿ ಬೆಳೆಯಬಹುದಾದಂತಹ ಸೊಪ್ಪುಗಳು, ತರಕಾರಿಗಳು ಹಾಗೂ ಹಣ್ಣಿನ ಗಿಡಗಳ ಮಹತ್ವ ಹಾಗೂ ದಿನನಿತ್ಯದ ಆಹಾರದಲ್ಲಿ ಅವುಗಳನ್ನು ಬಳಸುವ ವಿಧಾನಗಳ ಕುರಿತು ಮಾಹಿತಿ ನೀಡಿದರು. ಜೊತೆಗೆ ವಿಶ್ವ ಜೇನುಹುಳು ದಿನದ ಅಂಗವಾಗಿ ಜೇನು ತುಪ್ಪದ ಮಹತ್ವ, ಜೇನು ಸಾಕಾಣಿಕೆಯಿಂದಾಗುವ ಲಾಭಗಳು, ಜೇನುತುಪ್ಪದ ಸಂಸ್ಕರಣೆ ಜೊತೆಗೆ ಜೇನು ಸಾಕಾಣಿಕೆ ಮಾಡುವವರಿಗೆ ತೋಟಗಾರಿಕೆ ಇಲಾಖೆಯಿಂದ ದೊರೆಯುವ ಸೌಲಭ್ಯಗಗಳ ಬಗ್ಗೆ ತಿಳಿಸಿದರು.


ಹಕ್ಕುಗಳನ್ನು ಕಾಯ್ದಿರಿಸಿದೆ : ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ, ಸುತ್ತೂರು, ಮೈಸೂರು ಜಿಲ್ಲೆ                    ಭೇಟಿ ಸಂಖ್ಯೆ: